ಹುಬ್ಬಳ್ಳಿ: ಸ್ಮಾರ್ಟ್ ಸಿಟಿ ಯೋಜನೆಯಡಿ ಹುಬ್ಬಳ್ಳಿ-ಧಾರವಾಡ ನಗರಗಳನ್ನು ಸ್ಮಾರ್ಟ್ ಮಾಡಲಾಗ್ತಿದೆ. ಈ ನಿಟ್ಟಿನಲ್ಲಿ ಐಟಿ ಉದ್ಯಮಗಳೂ ಸ್ಥಾಪನೆಯಾಗಿವೆ. ಇನ್ನೇನು ಉತ್ತರ ಕರ್ನಾಟಕದ ಪ್ರತಿಭೆಗಳಿಗೆ ಅವಕಾಶ ನೀಡುವ ಮೂಲಕ ಉದ್ಯೋಗದ ಸಾಮ್ರಾಟನಾಗಬೇಕಿದ್ದ ಇನ್ಫೋಸಿಸ್ ಈಗ ಐಟಿ-ಬಿಟಿ ಜನರನ್ನು ಚಿಂತೆಗೀಡುಮಾಡಿದೆ. ಈ ನಿಟ್ಟಿನಲ್ಲಿ ವಾಣಿಜ್ಯನಗರಿ ಹುಬ್ಬಳ್ಳಿಯಲ್ಲಿ ವಿನೂತನ ಹೋರಾಟ ನಡೆಯುತ್ತಿದೆ.
ಹುಬ್ಬಳ್ಳಿಯ ವಿಮಾನ ನಿಲ್ದಾಣದಿಂದ ತುಸು ದೂರ ಸಾಗಿದರೆ ಸಿಗುವ ಇನ್ಫೋಸಿಸ್ ಕಟ್ಟಡ ಎಲ್ಲರ ಗಮನ ಸೆಳೆಯುತ್ತಿದೆ. ಕೆಲ ವರ್ಷಗಳ ಹಿಂದೆ ತಲೆ ಎತ್ತಿದ ಇನ್ಪೋಸಿಸ್ ಕಟ್ಟಡ ನೋಡಿದವರ ಬಾಯಲ್ಲಿ ಒಂದೇ ಮಾತು "ಅಲ್ಲಿ ಇನ್ಫೋಸಿಸ್ ಆಗೈತಿ ಅಂತಲ್ರಿ, ಅದ್ಯಾವಾಗ ಸ್ಟಾರ್ಟ್ ಆಗತೈತಿ..? ಎಲ್ಲರ ಮನಸಿನ್ಯಾಗ ಈ ಪ್ರಶ್ನೆ ಎದುರಾಗಿ ಬಹಳ ವರ್ಷ ಆಯ್ತು. ಇದಕ್ಕೆ ಉತ್ತರ ಮಾತ್ರ ಇನ್ನೂ ಸಿಕ್ಕಿಲ್ಲ. ಎಲ್ಲವೂ ಅಂದುಕೊಂಡಂತೆ ಆಗಿದ್ದರೆ, ಇನ್ಫೋಸಿಸ್ ಆರಂಭವಾಗಿ ಸಾವಿರಾರು ಜನ ಕೈತುಂಬ ಸಂಬಳ ಪಡೆಯುತ್ತಿದ್ದರು. ಆದರೆ, ಅದು ಸಾಧ್ಯವಾಗದೇ ಇನ್ನೂ ಕೂಡ ಕಾರ್ಯಾರಂಭವಾಗಿಲ್ಲ. ಈ ನಿಟ್ಟಿನಲ್ಲಿ ಹುಬ್ಬಳ್ಳಿಯ ಪ್ರಜ್ಞಾವಂತ ಜನ ಅಭಿಯಾನದ ಮೂಲಕ ಕಾರ್ಯರಂಭಕ್ಕೆ ಆಗ್ರಹಿಸಿದ್ದಾರೆ.
ಇನ್ನು ಹುಬ್ಬಳ್ಳಿ-ಧಾರವಾಡ ನಗರಗಳಲ್ಲಿ ಮೂಲಭೂತ ಸೌಕರ್ಯಗಳ ಕೊರತೆ ಇಲ್ಲ. ಅಂತಾರಾಷ್ಟ್ರೀಯ ಮಟ್ಟದ ವಿಮಾನ ನಿಲ್ದಾಣವೂ ಇದೆ. ರೈಲು ನಿಲ್ದಾಣ ಸೇರಿ ಎಲ್ಲ ವ್ಯವಸ್ಥೆ ಇದ್ದರೂ ಕೂಡ ಇನ್ಫೋಸಿಸ್, ಹುಬ್ಬಳ್ಳಿಯಲ್ಲಿ ತನ್ನ ಶಾಖೆ ಆರಂಭಿಸಿದರೇ ಒಳ್ಳೆಯದು ಎಂದು, ಇಂದು ನಡೆಯುತ್ತಿರುವ ಸಭೆಯಲ್ಲಿ ಸೂಕ್ತ ನಿರ್ಧಾರಕ್ಕೆ ಜನರು ಧಾರವಾಡ ಫೇಡಾ ವಿತರಣೆ ಮಾಡುವ ಮೂಲಕ ಕಾರ್ಯಾರಂಭಕ್ಕೆ ಆಗ್ರಹಿಸಿದ್ದಾರೆ.
ಈ ಇನ್ಫೋಸಿಸ್ ಕಟ್ಟಡ ನೋಡಿ ಹೊಸ ಸಪೋರ್ಟಿವ್ ಕೈಗಾರಿಕೆ, ಉದ್ಯೋಗ ಸೃಷ್ಟಿ ಆಗುತ್ತದೆ ಎಂಬ ನಿರೀಕ್ಷೆಯಲ್ಲಿ ಉತ್ತರ ಕರ್ನಾಟಕದ ಮಂದಿಗೆ ಸದ್ಯ ಆತಂಕ ಎದುರಾಗಿದೆ. ಇದೆಲ್ಲವೂ ಸುಖಾಂತ್ಯಗೊಂಡು ಅವಳಿ ನಗರದಲ್ಲಿ ಉದ್ಯೋಗ ಸ್ಥಾಪನೆಯ ಪರ್ವ ಆರಂಭವಾಗಿ, ಯುವಕರಿಗೆ ಸೂಕ್ತ ಅವಕಾಶ ನೀಡುವ. ಮೂಲಕ ಐಟಿ ಸಿಟಿಯ ಪರಿಕಲ್ಪನೆಯನ್ನು ಸಾಕಾರಗೊಳಿಸಬೇಕಿದೆ.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
15/07/2022 06:00 pm