ಹುಬ್ಬಳ್ಳಿ: ಹಳೆ ಹುಬ್ಬಳ್ಳಿ ಅಂದಾಕ್ಷಣ ನಿಜಕ್ಕೂ ಜನರಲ್ಲಿ ಮೂಡುವ ಭಾವನೆ ಶೈಕ್ಷಣಿಕ ಕ್ಷೇತ್ರದಿಂದ ಬಹುದೂರ ಉಳಿದಿರುವ ಪ್ರದೇಶ ಅಂತ. ಇಂತಹ ಕೀಳರಿಮೆಯನ್ನು ಹೋಗಲಾಡಿಸಿ ಶೈಕ್ಷಣಿಕ ಕ್ಷೇತ್ರದಲ್ಲಿ ಮಹತ್ವದ ಸಾಧನೆ ಮಾಡಲು ಇಲ್ಲೊಂದು ಸಂಸ್ಥೆ ಮುಂದಾಗಿದೆ. ಸ್ವಯಂ ಉದ್ಯೋಗ ಹಾಗೂ ಭವಿಷ್ಯಕ್ಕೆ ಭದ್ರ ಬುನಾದಿ ಹಾಕುವ ಮಹತ್ವದ ಕನಸನ್ನು ಸಾಕಾರಗೊಳಿಸಲು ಈ ಸಂಸ್ಥೆ ಮುನ್ನೆಲೆಗೆ ಬಂದಿದ್ದು, ಮತ್ತಷ್ಟು ಕ್ರಿಯಾ ಯೋಜನೆಯ ಮೂಲಕ ಶೈಕ್ಷಣಿಕ ಕ್ಷೇತ್ರದಲ್ಲಿ ಸಾಧನೆ ಮಾಡಲು ಸನ್ನದ್ಧವಾಗಿದೆ.
ಹೌದು.. ಹಳೆ ಹುಬ್ಬಳ್ಳಿಯಲ್ಲಿರುವ ಸುಂಡಕೆ ಫೌಂಡೇಶನ್ ಈಗಾಗಲೇ ಸಾಕಷ್ಟು ಶೈಕ್ಷಣಿಕ ತರಬೇತಿ ಹಾಗೂ ವೃತ್ತಿ ಕೌಶಲ್ಯಗಳ ಮೂಲಕ ನೂರಾರು ಜನರ ಜೀವನಕ್ಕೆ ಬೆಳಕಾಗಿರುವ ಸುಂಡಕೆ ಫೌಂಡೇಶನ್ ಈಗ ಹಳೆ ಹುಬ್ಬಳ್ಳಿ ಭಾಗದ ವಿದ್ಯಾರ್ಥಿಗಳಿಗಾಗಿಯೇ K-CET, NEET, JEE, KVPY ಸೇರಿದಂತೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ನೀಡಲು ಸಿದ್ಧವಾಗಿದೆ. ಈ ಮಹತ್ವದ ಕಾರ್ಯಕ್ಕೆ ಹುಬ್ಬಳ್ಳಿಯ ಶಿರೂರ್ ಪಾರ್ಕ್ ನಲ್ಲಿರುವ ಇಂಪಲ್ಸ್ ಪಿಯು ಸೈನ್ಸ್ ಕಾಲೇಜು ಕೈ ಜೋಡಿಸಿದ್ದು, ಎರಡೂ ಸಂಸ್ಥೆಯ ಸಹಭಾಗಿತ್ವದಲ್ಲಿ ಹಳೆ ಹುಬ್ಬಳ್ಳಿಯ ವಿದ್ಯಾರ್ಥಿಗಳಿಗೆ ಸಿಗಲಿದೆ. ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಭಾಗ್ಯ. ಹಾಗಿದ್ದರೇ ಇಲ್ಲಿ ತರಬೇತಿ ಪಡೆದ ವಿದ್ಯಾರ್ಥಿಗಳು ಏನ ಹೇಳ್ತಾರೆ ಅಂತ ಅವರನ್ನೊಮ್ಮೆ ಕೇಳಿ..
ಇನ್ನೂ ಹಳೆ ಹುಬ್ಬಳ್ಳಿಯ ಅಜಾದ್ ಬ್ಯಾಂಕ್ ಎದುರು ಸ್ವಸ್ತಿಕ ಮಾರ್ಕೆಟ್ ಬಿಲ್ಡಿಂಗ್ ಮೂರನೇ ಮಹಡಿಯಲ್ಲಿ 2021-ಡಿಸೆಂಬರ್ ನಲ್ಲಿ ಆರಂಭಗೊಂಡಿರುವ ಸುಂಡಕೆ ಫೌಂಡೇಶನ್, ಎಜುಕೇಷನ್, ಎಂಪವರ್ಮೆಂಟ್, ವೆಲ್ಫೇರ್ ಧ್ಯೇಯ ವಾಕ್ಯದ ಅಡಯಲ್ಲಿ ತಲೆ ಎತ್ತಿರುವ ಲೈಫ್ ಸ್ಕಿಲ್ ಅಕಾಡೆಮಿಯಾಗಿದೆ. ಸಲೀಂ ಸುಂಡಕೆ ಹಾಗೂ motivational speaker ಇಮ್ರಾನ್ ಸುಂಡಕೆ ನಿರ್ದೇಶನದಲ್ಲಿ ಜನ್ಮ ತಾಳಿರುವ ಸಂಸ್ಥೆ ಈಗಾಗಲೇ ಸಾಕಷ್ಟು ತರಬೇತಿಯನ್ನು ತನ್ನ ಒಡಲಿನಲ್ಲಿಟ್ಟುಕೊಂಡು ವಿದ್ಯಾರ್ಥಿಗಳನ್ನು ಪೋಷಣೆ ಮಾಡುತ್ತಿದೆ.
ಇಲ್ಲಿ 400ಕ್ಕೂ ಹೆಚ್ಚು ವಿದ್ಯಾರ್ಥಿಗಳು ತರಬೇತಿ ಪಡೆಯುತ್ತಿದ್ದಾರೆ. ಸಂವಹನ ಕೌಶಲ್ಯ, ವ್ಯಕ್ತಿತ್ವ ವಿಕಸನ, ಸಾರ್ವಜನಿಕ ಭಾಷಣ ಕಲೆ, ವ್ಯವಹಾರ ವೃದ್ಧಿಸುವ ತರಬೇತಿ, ಟೀಚರ್ ಟ್ರೇನಿಂಗ್ ಪ್ರೋಗ್ರಾಂ ಬಗ್ಗೆ ಉತ್ಕೃಷ್ಟ ಗುಣಮಟ್ಟದ ತರಬೇತಿಯನ್ನು ನೀಡುವ ಮೂಲಕ ಸಾಕಷ್ಟು ಹೆಸರು ಮಾಡಿದೆ. ಅಲ್ಲದೇ ಮಹಿಳೆಯರಿಗಾಗಿಯೇ ಮೆಹಿಂದಿ, ಬ್ಯೂಟಿಶಿಯನ್ ತರಬೇತಿ ನೀಡಲಾಗುತ್ತದೆ. ಕುರಾನ್, ದಿನಿಯತ್ ತರಬೇತಿ, ಕಂಪ್ಯೂಟರ್ ತರಬೇತಿ, ಹೋಮ್ ಸೈನ್ಸ್, ಆರ್ಟ್ & ಕ್ರಾಫ್ಟ್ ಬಗ್ಗೆ ಗುಣಮಟ್ಟದ ತರಬೇತಿಯನ್ನು ನೀಡುತ್ತಿದೆ. ಕಂಪ್ಯೂಟರ್ ಶಿಕ್ಷಣದಲ್ಲಿ ಬೇಸಿಕ್ ತರಬೇತಿ, Tally ERP-9, GST, ಆನ್ಲೈನ್ ಅಪ್ಲಿಕೇಶನ್, AUTO CAD, graphics design ತರಬೇತಿ ನೀಡುತ್ತಿದೆ. ಇನ್ನೂ ವಿಶೇಷ ಅಂದರೆ ಇಲ್ಲಿ ಒಂದನೇ ತರಗತಿಯಿಂದ ಹತ್ತನೆಯ ತರಗತಿಯವರೆಗೆ ಟ್ಯೂಷನ್, ಪಿಯುಸಿ, ಡಿಗ್ರಿ ಹಾಗೂ ಡಿಪ್ಲೊಮಾ ವಿದ್ಯಾರ್ಥಿಗಳಿಗೆ ಹಲವಾರು ತರಬೇತಿಗಳನ್ನು ನೀಡುತ್ತದೆ.
ಇನ್ನೂ ಚಿಕ್ಕ ಮಕ್ಕಳಿಗಾಗಿಯೇ ಇಂಗ್ಲಿಷ್ ಮಾಧ್ಯಮದಲ್ಲಿ ಪೂರ್ವ ಪ್ರಾಥಮಿಕ ಹಾಗೂ ಬೇಸಿಗೆ ತರಬೇತಿಯ ಜೊತೆಗೆ ಮಕ್ಕಳ ಬೌದ್ಧಿಕ ಮಟ್ಟ ವೃದ್ಧಿಗೆ ಹಲವಾರು ಆಟಗಳ ಮೂಲಕ ಕೌಶಲಗಳನ್ನು ಕಲಿಸಲಾಗುತ್ತದೆ. ಗುಣಮಟ್ಟದ ಶಿಕ್ಷಣ, ಕಲಿಕೆಗೆ ಉತ್ತಮ ವಾತಾವರಣ, ಸ್ಮಾರ್ಟ್ ಕ್ಲಾಸ್ ರೂಮ್, ಅಧುನಿಕ ತಂತ್ರಜ್ಞಾನದ ಲ್ಯಾಬ್ ಹಾಗೂ ಗ್ರಂಥಾಲಯಗಳನ್ನು ಹೊಂದಿರುವ ಸುಂಡಕೆ ಫೌಂಡೇಶನ್ ಹಳೆ ಹುಬ್ಬಳ್ಳಿಯಲ್ಲಿಯೇ ಮೊದಲ ಬಾರಿಗೆ ಸ್ಪರ್ಧಾತ್ಮಕ ತರಬೇತಿ ಶಿಕ್ಷಣ ಸಂಸ್ಥೆಯಾಗಿ ಹೊರಹೊಮ್ಮಿದ್ದು, ಹಳೆ ಹುಬ್ಬಳ್ಳಿಯನ್ನು ಎಜುಕೇಷನ್ ಹಬ್ ಮಾಡುವ ಕನಸಿಗೆ ಇಂಪಲ್ಸ್ ಪಿಯು ಸೈನ್ಸ್ ಕಾಲೇಜ ಮುಂದಾಗಿದೆ. ಈ ಬಗ್ಗೆ ಇಂಪಲ್ಸ್ ಕಾಲೇಜಿನ ಆಡಳಿತ ಮಂಡಳಿ ಏನು ಅಂತಾರೆ ಕೇಳಿ..
ಒಟ್ಟಿನಲ್ಲಿ ಮಹತ್ವದ ಆಶಾಭಾವನೆಯ ಜೊತೆಗೆ ಶೈಕ್ಷಣಿಕ ಕ್ಷೇತ್ರದಲ್ಲಿ ಹೊಸ ಮೈಲಿಗಲ್ಲನ್ನು ಸೃಷ್ಟಿಸುವ ಕನಸನ್ನು ಹೊತ್ತಿರುವ ಎರಡು ಸಂಸ್ಥೆಗಳು ಒಂದಾಗಿ ಈಗ ಹಳೆ ಹುಬ್ಬಳ್ಳಿಯಲ್ಲಿ ಶೈಕ್ಷಣಿಕ ಕ್ರಾಂತಿ ಮಾಡಲು ಮುಂದಾಗಿರುವುದು ನಿಜಕ್ಕೂ ವಿಶೇಷವಾಗಿದೆ. ಹಾಗಿದ್ದರೇ ಮತ್ತೇ ಯಾಕೆ ತಡ ಈಗಲೇ ಭೇಟಿ ನೀಡಿ..
ಸುಂಡಕೆ ಫೌಂಡೇಶನ್
ಅಜಾದ್ ಬ್ಯಾಂಕ್ ಎದುರು ಸ್ವಸ್ತಿಕ ಮಾರ್ಕೆಟ್ ಬಿಲ್ಡಿಂಗ್ ಎರಡು ಮತ್ತು ಮೂರನೇ ಮಹಡಿ
ಹಳೆ ಹುಬ್ಬಳ್ಳಿ
ದೂರವಾಣಿ ಸಂಖ್ಯೆ- 8088009812, 9060710077
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
23/04/2022 07:16 pm