ಹುಬ್ಬಳ್ಳಿ: ಎಲೆಕ್ಟ್ರಾನಿಕ್ ಸ್ಟಾರ್ಟ್ ಅಪ್ ಮಾಡುವವರಿಗೆ ರಾಜಧಾನಿಯೇ ಸೂಕ್ತ ಎನ್ನುವ ಕಾಲ ಈಗ ಮರೆಯಾಗಿದೆ. ತಾಂತ್ರಿಕ ನವೋದ್ಯಮ ಆರಂಭಿಸಲು ಸದ್ಯ ಹುಬ್ಬಳ್ಳಿಯಲ್ಲೇ ಟೆಕ್ ಪಾರ್ಕ್ ಶುರುವಾಗಿದೆ. ತಾಂತ್ರಿಕ ನವೋದ್ಯಮಕ್ಕೆ ಬೇಕಾದ ಎಲ್ಲ ಅತ್ಯಾಧುನಿಕ ಸೌಲಭ್ಯ ಹಾಗೂ ವಿಶಾಲ ಸ್ಥಳಾವಕಾಶ ಇಲ್ಲಿದೆ.
ಯೆಸ್! ಕೆ ಎಲ್ ಈ ಸಂಸ್ಥೆಯ ತಾಂತ್ರಿಕ ವಿಶ್ವವಿದ್ಯಾಲಯದಿಂದ ಎಚ್ ಈ ಎಕ್ಸ್ (ಹುಬ್ಬಳ್ಳಿ ಎಲೆಕ್ಟ್ರಾನಿಕ್ ಸಿಸ್ಟಮ್ ಡಿಸೈನ್ ಮ್ಯಾನುಫ್ಯಾಕ್ಚರಿಂಗ್ ಎಕ್ಸ್‌ಚೇಂಜ್) ಕೇಂದ್ರ ಉತ್ತರ ಕರ್ನಾಟಕದ ವಾಣಿಜ್ಯ ನಗರ ಹುಬ್ಬಳ್ಳಿಯಲ್ಲಿ ಇಂದಿನಿಂದಲೇ ಶುರುವಾಗಲಿದೆ.
ಈಗಾಗಲೇ ಹುಬ್ಬಳ್ಳಿಯಲ್ಲಿ ಸ್ಯಾಂಡ್ ಬಾಕ್ಸ್, ದೇಶಪಾಂಡೆ ಫೌಂಡೇಶನ್, ಟೈ ಹುಬ್ಬಳ್ಳಿ ಸಂಸ್ಥೆಗಳು ಸ್ಟಾರ್ಟ್ ಅಪ್ ಗೆ ಸಾಕಷ್ಟು ಪ್ರೋತ್ಸಾಹ ನೀಡುತ್ತಿವೆ.
ಕೆ ಎಲ್ ಈ ಟೆಕ್ ಪಾರ್ಕ್ ಆರಂಭಿಸಲು ರಾಜ್ಯ ಸರ್ಕಾರದ ಇನೋವೇಶನ್ ಮತ್ತು ಟೆಕ್ನಾಲಜಿ ಸರ್ವೀಸಸ್ ಹಾಗೂ ಇಂಡಿಯಾ ಎಲೆಕ್ಟ್ರಾನಿಕ್ಸ್ ಮತ್ತು ಸೆಮಿಕಂಡಕ್ಟರ್ಸ್ ಹಾಗೂ ಕೆ ಎಲ್ ಈ ತಾಂತ್ರಿಕ ವಿಶ್ವವಿದ್ಯಾಲಯ ಜಂಟಿಯಾಗಿ ಹುಬ್ಬಳ್ಳಿಯ ಬಿವಿಬಿ ಕಾಲೇಜು ಆವರಣದಲ್ಲಿ ಎಚ್ ಈ ಎಕ್ಸ್ ಕೇಂದ್ರವನ್ನು ಆರಂಭಿಸಿದೆ. ಇಂದಿನಿಂದ ಈ ಕೇಂದ್ರ ಕಾರ್ಯಾರಂಭ ಮಾಡಲಿದೆ ಎಂದು ಕೆ ಎಲ್ ಈ ತಾಂತ್ರಿಕ ವಿಶ್ವವಿದ್ಯಾಲಯದ ಕುಲಪತಿ ಡಾ. ಅಶೋಕ್ ಶೆಟ್ಟರ್ ತಿಳಿಸಿದ್ದಾರೆ.
Kshetra Samachara
02/12/2020 12:02 pm