ಕುಂದಗೋಳ: ಇದೇನು ಪ್ರಕೃತಿ ಮುನಿಸೋ, ವರುಣ ದೇವನ ಹಠವೋ, ರೈತಾಪಿ ಜಗತ್ತಿಗೆ ಕಂಟಕವೋ ತಿಳಿಯದು. ಮಳೆಯ ಅಭಾವದಿಂದ ಅನ್ನದಾತನ ಕುಲ ಕಷ್ಟದಲ್ಲಿದೆ.
ಇದೀಗ ಮಳೆ ಅಭಾವದ ಈ ಕಷ್ಟನಿವಾರಣೆಗಾಗಿ ಸಂತ ಶಿಶುನಾಳ ಶರೀಫರಿಗೆ ಚಿಲುಮೆ ನೀಡಿ ಹೆಸರಾದ ತಾಯಿ ಚಾಕಲಬ್ಬಿ ಯಲ್ಲಮ್ಮ ದೇವಿಗೆ ಮಳೆಗಾಗಿ ಉಡಿ ತುಂಬುವ ಕಾರ್ಯಕ್ರಮ ನೆರವೇರಿದೆ. ಡೊಳ್ಳು ಮೇಳಗಳ ಸದ್ದು, ಭಜನಾ ಪದಗಳ ಮೆರಗಿನ ನಡುವೆ ಜೋಗಮ್ಮಗಳ ನೇತೃತ್ವದಲ್ಲಿ ತಾಯಿ ಚಾಕಲಬ್ಬಿ ಯಲ್ಲಮ್ಮದೇವಿಗೆ ಮಳೆಗಾಗಿ ಉಡಿ ತುಂಬಿ ವಿಶೇಷ ಖಾದ್ಯಗಳನ್ನು ಮಾಡಿ ಪಡ್ಲಿಗಿ ತುಂಬಿ ವಿಶೇಷ ಪೂಜೆ ಅನ್ನಸಂತರ್ಪಣೆ ಕಾರ್ಯಕ್ರಮ ಕೈಗೊಳ್ಳಲಾಗಿದೆ.
ಮಂಗಳವಾರದ ನಿಮಿತ್ತವೇ ರೈತಾಪಿ ಜನರು ಯಲ್ಲಮ್ಮದೇವಿಗೆ ತಮ್ಮ ಭಕ್ತಿ ಸೇವೆ ಸಲ್ಲಿಸಿ ಮಳೆಯ ಕೃಪೆಗಾಗಿ ಮೋರೆ ಇಟ್ಟಿದ್ದು ಈಗಾಗಲೇ ಭೂತಾಯಿಯ ಮಡಿಲಿಗೆ ಹಾಕಿದ ಬೆಳೆಗಳನ್ನು ಉಳಿಸಿಕೊಳ್ಳಲು ರೈತಾಪಿ ಮಹಿಳೆಯರು ಧಾರ್ಮಿಕ ಆಚರಣೆ ಮೋರೆ ಹೋಗುತ್ತಿದ್ದಾರೆ.
Kshetra Samachara
28/06/2022 07:06 pm