ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನವಲಗುಂದ: ರೈತರ ಬೆಳೆ ಪರಿಹಾರ ತಾರತಮ್ಯ ಸರಿಪಡಿಸಲು ಆಗ್ರಹಿಸಿ ಮನವಿ

ನವಲಗುಂದ : ಅತಿವೃಷ್ಟಿಯಿಂದ ಹಾನಿಗೊಳಗಾದ ಬೆಳೆಗಳಿಗೆ ಸರ್ಕಾರ ಪರಿಹಾರ ನೀಡುವ ವೇಳೆ ನಿಯಮ ಮರೆತು ನವಲಗುಂದ ತಾಲೂಕಿನ ರೈತರಿಗೊಂದು ರೀತಿ ಹಾಗೂ ಪಕ್ಕದ ಜಿಲ್ಲೆಗೊಂದು ರೀತಿಯಲ್ಲಿ ಪರಿಹಾರ ನೀಡುವ ಮೂಲಕ ಅನ್ಯಾಯ ಮಾಡಲಾಗಿದೆ ಎಂದು ಜಾತ್ಯತೀತಿ, ಪಕ್ಷಾತೀತ ಮಹದಾಯಿ ಕಳಸಾ ಬಂಡೂರಿ ರೈತ ಹೋರಾಟ ಒಕ್ಕೂಟ ಕೇಂದ್ರ ಸಮಿತಿ ವತಿಯಿಂದ ರೈತರು ತಹಸೀಲ್ದಾರ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಿದರು.

ಮನವಿ ನೀಡಿ ಮಾತನಾಡಿದ ಒಕ್ಕೂಟದ ಅಧ್ಯಕ್ಷ ಲೋಕನಾಥ ಹೆಬಸೂರ, ಪ್ರಸಕ್ತ ಸಾಲಿನಲ್ಲಿ ಪ್ರಕೃತಿ ವಿಕೋಪದಿಂದ ಹಾನಿಗೊಳಗಾದ ಬೆಳೆಗಳಿಗೆ ಎನ್‌ ಡಿ ಆರ್ ಎಫ್ ಹಾಗೂ ಎಸ್‌ ಡಿ ಆರ್‌ ಎಫ್ ಮಾರ್ಗಸೂಚಿ ಅನ್ವಯ ಒಣ ಬೇಸಾಯ, ನೀರಾವರಿ ಹಾಗೂ ತೋಟಗಾರಿಕೆ ಬೆಳೆಗಳಿಗೆ ನೀಡುವ ಪರಿಹಾರವನ್ನು ವಿಂಗಡಿಸದೇ ತಾಲೂಕಿನ ಎಲ್ಲ ಪ್ರಕಾರದ ರೈತರಿಗೂ ಮಾರ್ಗಸೂಚಿಯಂತೆ ಮಾತ್ರ ಪರಿಹಾರ ನೀಡಿದ್ದರಿಂದ ನೀರಾವರಿ ಆಶ್ರಿತ ರೈತರಿಗೆ ಅನ್ಯಾಯವಾಗಿದೆ ಎಂದರು.

ಪಕ್ಕದ ಗದಗ ಹಾಗೂ ಹಾವೇರಿ ಜಿಲ್ಲೆಗಳಲ್ಲಿ ನೀಡಿದಂತೆ ಹೆಚ್ಚಿನ ಪರಿಹಾರ ನೀಡಬೇಕು. ಸರಕಾರದಿಂದ ಹೆಸರು ಖರೀದಿ ಕೇಂದ್ರ ಆರಂಭಿಸಿದ್ದರೂ ತೇವಾಂಶ ನೆಪ ಹೇಳಿ ಖರೀದಿ ನಿರಾಕರಿಸಲಾಗುತ್ತಿದೆ. ಸದ್ಯ ಶೇ. 12ರಷ್ಟು ತೇವಾಂಶ ಬರುವುದು ಕಷ್ಟ ಇದನ್ನು ಬದಲಿಸಬೇಕು. ಇಲ್ಲವಾದಲ್ಲಿ ಬೀದಿಗಿಳಿದು ಹೋರಾಟ ಮಾಡುವುದು ಅನಿವಾರ್ಯ ಎಂದು ಎಚ್ಚರಿಸಿದರು.

ಈ ಸಂದರ್ಭದಲ್ಲಿ ರಾಮನಾಯ್ಕ ನಾಯ್ಕರ, ಎ ಎಂ ಶಲವಡಿ, ಶಿವಾನಂದ ಮಠಪತಿ, ಫಕ್ಕಿರಗೌಡ ಗೊಬ್ಬರಗುಂಪಿ, ಈರಯ್ಯ ಹಿರೇಮಠ, ಪಿ ಎಂ ಬೆಳಗಿ, ಮಂಜು ಸುಬೇದಾರಮಠ, ಮಲ್ಲಯ್ಯ ಪೂಜಾರ, ಬಸಪ್ಪ ತಳವಾರ, ಗೌಡಪ್ಪ ಗೌಡ ದೊಡ್ಡಮನಿ, ಡಿ.ಜಿ.ಹೆಬಸೂರ, ಡಿ.ಎನ್.ಹಡಪದ ಮತ್ತಿತರರಿದ್ದರು.

Edited By : PublicNext Desk
Kshetra Samachara

Kshetra Samachara

13/10/2022 08:34 pm

Cinque Terre

22.51 K

Cinque Terre

1

ಸಂಬಂಧಿತ ಸುದ್ದಿ