ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅಮ್ಮಿನಬಾವಿ ಬಳಿ ಭೀಕರ ಅಪಘಾತ : ಕಾಂಗ್ರೆಸ್ ಮುಖಂಡ ಸೇರಿ ಇಬ್ಬರ ದುರ್ಮರಣ

ಧಾರವಾಡ: ವೇಗವಾಗಿ ಬಂದ ಕಾರು ನಿಯಂತ್ರಣ ತಪ್ಪಿ ರಸ್ತೆ ಬದಿಯ ಸೇತುವೆಗೆ ಡಿಕ್ಕಿ ಹೊಡೆದ ಪರಿಣಾಮ, ವಾಹನ ಪಲ್ಟಿಯಾಗಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸೇರಿ ಇಬ್ಬರು ಸ್ಥಳದಲ್ಲಿ ಸಾವಿಗೀಡಾದ ಘಟನೆ ಅಮ್ಮಿನಬಾವಿ ಸಮೀಪ ನಡೆದಿದೆ.ಘಟನೆಯಲ್ಲಿ ಯರಗಟ್ಟಿ-ಮುನವಳ್ಳಿ ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ಕುಮಾರ ಯಶವಂತ ಸೋಮಶೇಖರ ಯಲಿಗಾರ ಹಾಗೂ ಜೊತೆಗಿದ್ದ ಮತ್ತೋರ್ವ ಸಾವಿಗೀಡಾಗಿದ್ದಾರೆ.

ಕಾರು ಸಂಪೂರ್ಣವಾಗಿ ನಜ್ಜುಗುಜ್ಜಾಗಿದ್ದು, ಶವಗಳನ್ನ ಮರಣೋತ್ತರ ಪರೀಕ್ಷೆಗಾಗಿ ಧಾರವಾಡದ ಸಿವಿಲ್ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Edited By : Nirmala Aralikatti
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

11/10/2022 09:41 am

Cinque Terre

99.87 K

Cinque Terre

12

ಸಂಬಂಧಿತ ಸುದ್ದಿ