ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬ್ರೇಕಿಂಗ್ : ನವಲಗುಂದ : ಬೆಣ್ಣೆ ಹಳ್ಳದಲ್ಲಿ ಕೊಚ್ಚಿ ಹೋದ ಯುವಕನ ಮೃತ ದೇಹ ಪತ್ತೆ

ನವಲಗುಂದ : ಶುಕ್ರವಾರ ಮಧ್ಯಾಹ್ನ ಒಂದು ಗಂಟೆಯ ಸುಮಾರಿಗೆ ನವಲಗುಂದ ತಾಲ್ಲೂಕಿನ ತಡಹಾಳ ಗ್ರಾಮದ ಬಳಿ ಹಾದು ಹೋಗುವ ಬೆಣ್ಣೆ ಹಳ್ಳದಲ್ಲಿ ಯುವಕನೋರ್ವ ಕೊಚ್ಚಿ ಹೋಗಿದ್ದ. ಇಂದು ಆತನ ಶವ ಪತ್ತೆಯಾಗಿದೆ.

ಹೌದು ತಡಹಾಳ ಗ್ರಾಮದ 32 ವಯಸ್ಸಿನ ಸದಾನಂದ ಶಿವಣಪ್ಪ ಮಾದರ ಎಂಬುವವರು ಬೆಣ್ಣೆ ಹಳ್ಳದ ಸೇತುವೆ ದಾಟುವ ಸಂದರ್ಭದಲ್ಲಿ ಬೈಕ್ ಸ್ಕಿಡ್ ಆದ ಪರಿಣಾಮ ಬೈಕ್ ಸಮೇತ ಹಳ್ಳದಲಿ ಬಿದ್ದಿದ್ದರು.ಕಳೆದ ಸುಮಾರು 40 ಗಂಟೆಗಳಿಂದ ಎನ್ ಡಿ ಆರ್ ಎಫ್ ಹಾಗೂ ಅಗ್ನಿ ಶಾಮಕ ದಳದಿಂದ ಕಾರ್ಯಾಚರಣೆ ನಡೆಸಿದರೂ ಶವ ಪತ್ತೆ ಆಗಿರಲಿಲ್ಲ. ಆದರೆ ಇಂದು ಭಾನುವಾರ ಬೆಳಿಗ್ಗೆ ಯುವಕನ ಶವ ತಾನಾಗಿಯೇ ನೀರಿನ ಮೇಲೆ ಬಂದಿದೆ.

ನೀರಿನ ಹರಿವು ಹೆಚ್ಚಿದ್ದರೂ ಸಹ ಆಕಸ್ಮಿಕ ನೀರಿಗೆ ಬಿದ್ದ ಯುವಕನ ದೇಹ ಕೊಚ್ಚಿ ಹೋಗಿಲ್ಲ. ಮುಳುಗಿದ ಸ್ಥಳದಲ್ಲೇ ದೇಹ ಪತ್ತೆಯಾಗಿದೆ. ಬೆಳಗಿನ ಜಾವ ಹಳ್ಳದ ನೀರಿನ ಮೇಲೆ ತೇಲುತ್ತಿದ್ದ ದೇಹವನ್ನು ಕಂಡ ಗ್ರಾಮ ಪಂಚಾಯತ್ ಸಿಬ್ಬಂದಿ ಕೂಡಲೇ ತಹಶೀಲ್ದಾರ್ ಗೆ ವಿಷಯ ತಿಳಿಸಿದ್ದಾರೆ. ಸ್ಥಳಕ್ಕೆ ಅಗ್ನಿ ಶಾಮಕ ದಳ ತೆರಳುತ್ತಿದೆ.

Edited By : Nirmala Aralikatti
Kshetra Samachara

Kshetra Samachara

04/09/2022 07:45 am

Cinque Terre

104.83 K

Cinque Terre

0

ಸಂಬಂಧಿತ ಸುದ್ದಿ