ನವಲಗುಂದ : ನವಲಗುಂದ ಭಾಗದಲ್ಲಿ ಹರಿಯುವ ಬೆಣ್ಣೆ ಹಳ್ಳ ಶುಕ್ರವಾರ ಉಕ್ಕಿ ಹರಿದ ಪರಿಣಾಮ ನವಲಗುಂದ ತಾಲ್ಲೂಕಿನ ತಡಹಾಳ ಗ್ರಾಮದ ಬಳಿಯಲ್ಲಿ ಯುವಕನೋರ್ವ ಕೊಚ್ಚಿ ಹೋದ ಘಟನೆ ನಡೆದಿದೆ.
ನವಲಗುಂದ ತಾಲ್ಲೂಕಿನ ತಡಹಾಳ ಗ್ರಾಮದ ಬಳಿ ಹಾದು ಹೋಗುವ ಬೆಣ್ಣೆ ಹಳ್ಳದ ಸೇತುವೆ ದಾಟುವಾಗ ಸದಾನಂದ ಶಿವಣಪ್ಪ ಮಾದರ ಎಂಬಾತ ಆಕಸ್ಮಿಕವಾಗಿ ಹಳ್ಳದಲ್ಲಿ ಬಿದ್ದಿದ್ದ ಎನ್ನಲಾಗಿದೆ.
ಪರಿಣಾಮ ಉಕ್ಕಿ ಹರಿಯುತ್ತಿರುವ ಬೆಣ್ಣೆ ಹಳ್ಳದಲ್ಲಿ ಸಿಲುಕಿ ಕೊಚ್ಚಿ ಹೋಗಿದ್ದು, ಸ್ಥಳಕ್ಕೆ ಎನ್‌ಡಿಆರ್‌ಎಫ್ ತಂಡ ತೆರಳಿದ್ದು, ಹುಡುಕಾಟ ನಡೆದಿದೆ. ತಹಶೀಲ್ದಾರ್ ಅನಿಲ ಬಡಿಗೇರ ಸ್ಥಳಕ್ಕೆ ಧಾವಿಸುತ್ತಿದ್ದಾರೆ. ಇನ್ನು ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
02/09/2022 03:46 pm