ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಹೊರಟ್ಟಿ ಕಾರು ಅಪಘಾತ:ಬೈಕ್ ಸವಾರನಿಗೆ ಗಾಯ:ಕಿಮ್ಸ್‌ಗೆ ದಾಖಲು!

ಹುಬ್ಬಳ್ಳಿ:ಪತ್ರಕರ್ತರ ವಾರ್ಷಿಕ ಪ್ರಶಸ್ತಿ ಪ್ರಧಾನ ಸಮಾರಂಭ ಕಾರ್ಯಕ್ರಮ ಮುಗಿಸಿಕೊಂಡು ಹೋಗುತ್ತಿದ್ದಾಗ ವಿಧಾನ ಪರಿಷತ್ ಸದಸ್ಯರಾದ ಬಸವರಾಜ ಹೊರಟ್ಟಿಯವರ ಕಾರು ಎದುರಿಗೆ ಹೋಗುತ್ತಿದ್ದ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದಿರೋ ಘಟನೆ ಬಿವಿಬಿ ಕ್ಯಾಂಪಸ್ ನಲ್ಲಿ ನಡೆದಿದೆ.

ಸವದತ್ತಿ ‌ಮೂಲದ ಕೆಂಚಪ್ಪ ಎಂಬಾತನೆ ಗಾಯಗೊಂಡ ಬೈಕ್ ಸವಾರನಾಗಿದ್ದಾನೆ. ಅಪಘಾತದಲ್ಲಿ ವಾಹನ ಸವಾರನಿಗೆ ಗಂಭೀರ ಗಾಯಗಳಾಗಿದ್ದು, ಅರ್ಧ ಗಂಟೆಯಾದರೂ ಘಟನಾ ಸ್ಥಳಕ್ಕೆ ಅಂಬ್ಯುಲೆನ್ಸ್ ಬರಲಿಲ್ಲ.

ಘಟನೆ ನಡೆದ 10 ನಿಮಿಷ ಹೊರಟ್ಟಿ ಸ್ಥಳದಲ್ಲಿದ್ದು, ನಂತರ ಅಲ್ಲಿಂದ ಬೇರೆ ವಾಹನ ತರಿಸಿ ಹೊರಟು ಹೋದರು. ಗಾಯಾಳುವನ್ನು ಕಿಮ್ಸ್ ಗೆ ದಾಖಲಿಸಲಾಗಿದೆ. ಸ್ಥಳಕ್ಕೆ ಉತ್ತರ ಸಂಚಾರಿ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು.

Edited By : Nagesh Gaonkar
Kshetra Samachara

Kshetra Samachara

07/08/2022 07:08 pm

Cinque Terre

58.5 K

Cinque Terre

11

ಸಂಬಂಧಿತ ಸುದ್ದಿ