ಧಾರವಾಡ: ಧಾರವಾಡ ಜೆ ಎಸ್ ಎಸ್ ಕಾಲೇಜಿನ ಎದುರುಗಡೆ ಬೆಂಕಿ ಅವಘಡ ಸಂಭವಿಸಿ ಕಾರು ಹೊತ್ತಿ ಉರಿದ ಘಟನೆ ನಡೆದಿದ್ದು, ಅಗ್ನಿ ಶಾಮಕ ದಳ ಹರಸಾಹಸ ಪಟ್ಟು ಬೆಂಕಿ ನಂದಿಸಿದೆ. ಅದೃಷ್ಟವಶಾತ್ ಈ ಘಟನೆಯಲ್ಲಿ ಯಾವುದೇ ಪ್ರಾಣ ಹಾನಿ ಆಗಿಲ್ಲ.
ಹುಬ್ಬಳ್ಳಿಯ ನಿವಾಸಿಯಾಗಿದ್ದ, ವಿಜಯಸಾಗರ ಕುಟುಂಬ ಸಮೇತ ಧಾರವಾಡಕ್ಕೆ ಬರುವಾಗ ಜೆ ಎಸ್ ಎಸ್ ಕಾಲೇಜು ಬಳಿ ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಈ ವೇಳೆ ಕಾರಿನಲ್ಲಿ ಗಂಡ-ಹೆಂಡತಿ ಇಬ್ಬರು ಮಕ್ಕಳು ಪ್ರಯಾಣ ಮಾಡುತ್ತಿದ್ದರು. ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡ ತಕ್ಷಣ ಸಾರ್ವಜನಿಕರು ಕಾರಿನಲ್ಲಿ ಇದ್ದ ಕುಟುಂಬವನ್ನ ರಕ್ಷಣೆ ಮಾಡಿದ್ದಾರೆ.
ಇನ್ನು ಘಟನಾ ಸ್ಥಳಕ್ಕೆ ವಿದ್ಯಾಗಿರಿ ಪೂಲೀಸರು ಹಾಗೂ ಸಂಚಾರಿ ಪೂಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
Kshetra Samachara
15/05/2022 03:11 pm