ಹುಬ್ಬಳ್ಳಿ: ಕಾರು ಹಾಗೂ ಕಂಟೇನರ್ ಲಾರಿ ಮುಖಾಮುಖಿ ಡಿಕ್ಕಿ ಹೊಡೆದ ಭೀಕರ ಘಟನೆ ಹುಬ್ಬಳ್ಳಿ- ವಿಜಯಪುರ ರಸ್ತೆಯ ಹೆಬಸೂರು ಸಮೀಪ ನಡೆದಿದೆ.
ಇಂದು ರವಿವಾರ ಮಧ್ಯಾಹ್ನ ಮಧ್ಯಾಹ್ನ 1:50ಕ್ಕೆ ಈ ಘಟನೆ ನಡೆದಿದೆ. ಮಹಾರಾಷ್ಟ್ರ ಪಾಸಿಂಗ್ ಕಾರು ಅಪಘಾತದಲ್ಲಿ ಸಂಪೂರ್ಣವಾಗಿ ಜಖಂಗೊಂಡಿದೆ. ಇನ್ನು ಅಪಘಾತ ಸಂಭವಿಸುತ್ತಿದ್ದಂತೆ ಏರ್ ಬ್ಯಾಗ್ ತೆರೆದುಕೊಂಡಿದ್ದರಿಂದ ಕಾರಿನಲ್ಲಿದ್ದ ಇಬ್ಬರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಇನ್ನು ಲಾರಿ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ.
Kshetra Samachara
27/03/2022 02:29 pm