ಅಣ್ಣಿಗೇರಿ: ತಾಲೂಕಿನ ತುಪ್ಪದಕುರಹಟ್ಟಿ ಗ್ರಾಮದ ಹೊರವಲಯದ ಪ್ಲಾಟ್ ಹತ್ತಿರ ವ್ಯಕ್ತಿಯೊಬ್ಬರು ರಸ್ತೆ ಪಕ್ಕದಲ್ಲಿ ನಡೆದುಕೊಂಡು ಹೋಗುತ್ತಿದ್ದರು. ಇದೇ ಸಂದರ್ಭದಲ್ಲಿ ಅತಿ ವೇಗವಾಗಿ ಟ್ರ್ಯಾಕ್ಟರ್ ಬಂದಿದೆ. ಇದರಿಂದ ಟ್ರ್ಯಾಕ್ಟರ್ ಟ್ರೈಲರ್ ಪಳಕ ವ್ಯಕ್ತಿಗೆ ಬಡಿದು ಮೃತಪಟ್ಟಿದ್ದಾರೆ.
ಟ್ರೈಲರ್ ನ ಪಳಕ ಬಡಿದ ರಭಸಕ್ಕೆ ವ್ಯಕ್ತಿಯ ತಲೆಗೆ ಗಂಭೀರ ಗಾಯ ಆಗಿದ್ದು, ಆಸ್ಪತ್ರೆಗೆ ರವಾನಿಸುವ ಮಾರ್ಗ ಮಧ್ಯದಲ್ಲಿ ಸಾವನ್ನಪ್ಪಿದ್ದಾರೆ. ಚಾಲಕ ಟ್ರ್ಯಾಕ್ಟರ್ ಪರಾರಿ ಆಗಿದ್ದಾನೆ.
ಘಟನೆಗೆ ಸಂಬಂಧಿಸಿದಂತೆ ಅಣ್ಣಿಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದಾರೆ.
Kshetra Samachara
15/03/2022 04:29 pm