ಹುಬ್ಬಳ್ಳಿ: ಅಪಾರ್ಟ್‌ಮೆಂಟ್ ನ ಮನೆಯೊಂದರಲ್ಲಿ ಏಕಾಏಕಿ ಬಿರುಕು ಕಾಣಿಸಿಕೊಂಡಿದ್ದು, ಗಾಬರಿಗೊಂಡ ನಿವಾಸಿಗಳು ಮನೆಯಿಂದ ಹೊರ ಬಂದಿರುವ ಘಟನೆಯೊಂದು ಗೋಕುಲ ರಸ್ತೆಯ ಅಕ್ಷಯ ಪಾರ್ಕನ್ ಅಪಾರ್ಟ್ ಮೆಂಟ್ ನಲ್ಲಿ ನಡೆದಿದೆ.
ಮನೆಯಲ್ಲಿ ಬಿರುಕು ಕಾಣಿಸಿಕೊಂಡ ಹಿನ್ನೆಲೆ ಗಾಬರಿಗೊಂಡ ನಿವಾಸಿಗಳು ಅಪಾರ್ಟ್‌ಮೆಂಟ್ ನಿಂದ ಹೊರಗಡೆ ಓಡಿ ಬಂದಿದ್ದಾರೆ. ಅಲ್ಲದೇ ಮನೆಯಿಂದ ಹೊರಗೆ ಬಂದು ರಸ್ತೆಯಲ್ಲಿ ಅಪಾರ್ಟ್ ಮೆಂಟ್ ನಿವಾಸಿಗಳು ನಿಂತುಕೊಂಡಿದ್ದಾರೆ. 25 ಕ್ಕೂ ಅಧಿಕ ವರ್ಷ ಹಳೆಯದಾಗಿರುವ ಅಪಾರ್ಟ್ ಮೆಂಟ್ ನಲ್ಲಿ ಏಕಾಏಕಿ ಬಿರುಕು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಜನರು ಗಾಬರಿಗೊಂಡಿದ್ದಾರೆ.
ಇನ್ನೂ ಸ್ಥಳಕ್ಕೆ ಆಗಮಿಸದ ಅಪಾರ್ಟ್ಮೆಂಟ್ ನ ಮಾಲಿಕರ ವಿರುದ್ಧ ನಿವಾಸಿಗಳು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.
Kshetra Samachara
01/01/2022 11:56 am