ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿಯಲ್ಲಿ ಚೇಳು ಕಡಿದು ಯುವಕ ಸಾವು

ಹುಬ್ಬಳ್ಳಿ : ಮೂರು ದಿನಗಳ ಹಿಂದೆ ಮನೆಯಲ್ಲಿ ಚೇಳು ಕಡಿಸಿಕೊಂಡು ಚಿಕಿತ್ಸೆ ಪಡೆದುಕೊಳ್ಳದ ಯುವಕನಿಗೆ ಆರೋಗ್ಯದಲ್ಲಿ ಏರುಪೇರಾಗಿ ಸಾವಿಗೀಡಾದ ಘಟನೆ ಒಂದು ನಡೆದಿದೆ.

ಮೃತ ದುರ್ದೈವಿಯನ್ನು ಹೆಬ್ಬಳ್ಳಿ ಗ್ರಾಮದ ಯಲ್ಲಪ್ಪ ಎಂದು ಗುರುತಿಸಲಾಗಿದೆ. ಯಲ್ಲಪ್ಪ ಮನೆಯಲ್ಲಿ ಚೇಳು ಕಡಿದು ಮೂರು ದಿನವಾದರೂ ಕೂಡಾ ಚಿಕಿತ್ಸೆ ಪಡೆಯದೆ ಮನೆಯಲ್ಲಿದ್ದ. ಮೂರು ದಿನಗಳ ನಂತರ ಅಸ್ವಸ್ಥಗೊಂಡಿದ್ದ.

ಅಸ್ವಸ್ಥಗೊಂಡ ಯಲ್ಲಪ್ಪನನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲು ಮಾಡಿದರೂ ಕೂಡ, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ. ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಶವಾಗಾರಕ್ಕೇ ರವಾನೆ ಮಾಡಿದ್ದಾರೆ. ಈ ಘಟನೆ ಧಾರವಾಡ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Edited By : Nirmala Aralikatti
Kshetra Samachara

Kshetra Samachara

28/12/2021 09:50 am

Cinque Terre

33.57 K

Cinque Terre

5

ಸಂಬಂಧಿತ ಸುದ್ದಿ