ಹುಬ್ಬಳ್ಳಿ: ಗ್ಯಾಸ್ ಪೈಪ್‌ಲೈನ್ ಒಡೆದು ಅನಿಲ ಸೋರಿಕೆಯಾಗಿರುವ ಘಟನೆ ಸುಳ್ಳದ ರಸ್ತೆಯ ತ್ರಿಬಿ ಹೊಟೆಲ್ ಮುಂಭಾಗದ ಚರಂಡಿಯಲ್ಲಿ ಸಂಭವಿಸಿದೆ.
ಮಹಾನಗರ ಪಾಲಿಕೆಯವರು ಒಳಚರಂಡಿ ದುರಸ್ತಿ ಕಾರ್ಯ ಕೈಗೊಂಡ ಸಂದರ್ಭದಲ್ಲಿ ಜೆಸಿಬಿಯಿಂದ ಅಂದಾಜು 4.5 ಅಡಿ ಆಳದಲ್ಲಿ ಅಗೆಯುವಾಗ ಗ್ಯಾಸ್ ಪೈಪ್ಗೆ ತಾಗಿ ಒಡೆದು ಹೋಗಿದೆ. ಪೈಪ್ ಒಡೆದಿದ್ದರಿಂದ ಈ ಅವಘಡ ಸಂಭವಿಸಿದೆ. ಈಗಾಗಲೇ ಸ್ಥಳೀಯರು ಪೋಲಿಸರು, ಅಗ್ನಿಶಾಮಕ ದಳದ ಸಿಬ್ಬಂದಿಗಳಿಗೆ ಮಾಹಿತಿ ತಿಳಿಸಲಾಗಿದೆ.
ಆದರೆ ಈವರೆಗೆ ಯಾರು ಸ್ಥಳಕ್ಕೆ ದೌಡಾಯಿಸದ ಕಾರಣ ಅನಿಲ ಸೋರಿಕೆಯಿಂದ ಅಕ್ಕಪಕ್ಕದ ಮನೆಯವರಲ್ಲಿ ಆತಂಕ ಸೃಷ್ಟಿಯಾಗಿದೆ. ಇನ್ನು ಗ್ಯಾಸ್ ಪೈಪ್‌ಲೈನ್ ಒಡೆದು ಅನಿಲ ಸೋರಿಕೆ ಆಗಿದ್ದು, ಗ್ಯಾಸ್ ಪೈಪ್‌ಲೈನ್ ಹಾನಿಯಾದ ಹಿನ್ನೆಲೆ ಇನ್ನಷ್ಟು ಆಳದಲ್ಲಿ ಪೈಪ್‌ಲೈನ್ ಅಳವಡಿಕೆಗೆ ಸ್ಥಳೀಯರು ಒತ್ತಾಯಿಸಿದ್ದಾರೆ.
Kshetra Samachara
11/11/2021 12:48 pm