ಹುಬ್ಬಳ್ಳಿ: ತಾಂತ್ರಿಕ ತೊಂದರೆಯಿಂದ ಕಾರವೊಂದು ರಸ್ತೆಯಲ್ಲಿಯೇ ಹೊತ್ತಿ ಉರಿದ ಘಟನೆ ಹುಬ್ಬಳ್ಳಿ ಉಣಕಲ್ ಕೆರೆ ಹತ್ತಿರದ ಪ್ರೆಸಿಡೆಂಟ್ ಹೋಟೆಲ್ ಎದುರಿನಲ್ಲಿ ನಡೆದಿದೆ.
ಕಾರಿನ ಬೆಂಕಿಯ ಕೆನ್ನಾಲಿಗೆ ರಸ್ತೆಯುದ್ದಕ್ಕೂ ಹರಡಿದ್ದು, ಹೊಟೇಲ್ ನಲ್ಲಿರೋ ಗ್ರಾಹಕರು ಆತಂಕದಿಂದ ಹೊರಗೆ ಬಂದು ನೋಡುವಂತಾಗಿದೆ. ಇನ್ನೂ ಏಕಾಏಕಿ ಬೆಂಕಿ ಕಾಣಿಸಿಕೊಂಡಿದ್ದು, ಸ್ಥಳೀಯರಲ್ಲಿ ಆತಂಕವನ್ನುಂಟು ಮಾಡಿದೆ.
ಇನ್ನೂ ಕಾರಿನ ಮಾಲೀಕರ ಬಗ್ಗೆ ಮಾಹಿತಿ ಲಭ್ಯವಾಗಬೇಕಿದೆ. ಅಲ್ಲದೇ ಕಾರ್ ಏಕಾಏಕಿ ಹೊತ್ತಿ ಉರಿಯಲು ಕಾರಣ ಏನು ಎಂಬುವ ಮಾಹಿತಿ ಲಭ್ಯವಾಗಬೇಕಿದೆ.
Kshetra Samachara
16/09/2021 11:10 pm