ಹುಬ್ಬಳ್ಳಿ: ಬೈಕ್ ಹಿಂಬದಿಯಲ್ಲಿ ಕುಳಿತಿದ್ದ ಸವಾರ ಆಯತಪ್ಪಿ ಕೆಳಗೆ ಬಿದ್ದ ವೇಳೆ ಹಿಂಬದಿ ಸವಾರನ ಮೇಲೆ ಬಸ್ ಹರಿದು ಯುವಕ ಸ್ಥಳದಲ್ಲಿಯೇ ಸಾವನ್ನಪ್ಪಿದ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ. ಹುಬ್ಬಳ್ಳಿಯ ಕಾರವಾರ ರಸ್ತೆಯ ಕೆಇಬಿ ಗ್ರೀಡ್ ಬಳಿ ಹುಬ್ಬಳ್ಳಿಯಿಂದ ಲಕ್ಷ್ಮೇಶ್ವರಕ್ಕೆ ಹೊರಟಿದ್ದ ಬಸ್ ಯುವಕನ ಮೇಲೆ ಹಾಯ್ದ ಪರಿಣಾಮ ಯುವಕ ಸ್ಥಳದಲ್ಲಿಯೇ ಸಾವಿಗೀಡಾದ್ದಾನೆ.
ಬೈಕ್ ಸವಾರ ಕಾರೊಂದನ್ನು ಓವರ್ ಟೇಕ್ ಮಾಡಲು ಹೋದಾಗ, ಬೈಕ್ ಹಿಂಬದಿ ಕೂತಿದ್ದ ಯುವಕ ನಿಯಂತ್ರಣ ತಪ್ಪಿ ಕೆಳಗೆ ಬಿದ್ದಿದ್ದಾನೆ. ಅದೇ ಸಮಯದಲ್ಲಿ ಬಸ್ ಹಿಂದಿನಿಂದ ಬಂದು ಆತನ ತಲೆ ಮೇಲೆ ಹಾಯ್ದ ಪರಿಣಾಮ ದುರ್ಘಟನೆ ನಡೆದಿದೆ. ಮೃತಪಟ್ಟ ಯುವಕ ಕೆಲವು ದಿನಗಳ ಹಿಂದೆಯಷ್ಟೇ ಉತ್ತರ ಪ್ರದೇಶದಿಂದ ಕೆಲಸಕ್ಕೆಂದು ಹುಬ್ಬಳ್ಳಿಗೆ ಆಗಮಿಸಿದ್ದ. ಮೃತ ವ್ಯಕ್ತಿಯ ಹೆಸರು. ವಿವರವನ್ನು ಪೊಲೀಸರು ಕಲೆ ಹಾಕುತ್ತಿದ್ದಾರೆ.
ಅಪಘಾತ ನಡೆಯುತ್ತಿದ್ದಂತೆ ಕಾರವಾರ ರಸ್ತೆಯಲ್ಲಿ ಕೆಲ ಕಾಲ ಸಂಚಾರ ಅಸ್ತವ್ಯಸ್ತಗೊಂಡಿತ್ತು. ತಕ್ಷಣವೇ ಸ್ಥಳಕ್ಕೆ ಆಗಮಿಸಿದ ಸಂಚಾರಿ ಠಾಣೆಯ ಪೊಲೀಸರು ಶವವನ್ನು ಕಿಮ್ಸಗೆ ರವಾನೆ ಮಾಡಿ, ಸಂಚಾರವನ್ನು ಸುಗಮಗೊಳಿಸಿದರು. ಯುವಕನ ವಿವರವನ್ನು ಸಂಚಾರಿ ಠಾಣೆಯ ಪೊಲೀಸರು ಪಡೆಯುತ್ತಿದ್ದು, ಪ್ರಕರಣ ದಕ್ಷಿಣ ಸಂಚಾರಿ ಠಾಣೆಯಲ್ಲಿ ದಾಖಲಾಗಿದೆ.
Kshetra Samachara
03/02/2021 03:36 pm