ಹುಬ್ಬಳ್ಳಿ: ಎಳೆನೀರನ್ನು ತುಂಬಿಕೊಂಡು ಬರುತ್ತಿದ್ದ ಲಾರಿಯ ಎಕ್ಸೆಲ್ ಕಟ್ ಆದ ಪರಿಣಾಮ, ಲಾರಿ ಒಂದು ಪಲ್ಟಿಯಾದ ಘಟನೆ ಹುಬ್ಬಳ್ಳಿ ಸಮಿಪದ ವರೂರು ಬಳಿ ನಡೆದಿದೆ.
ತುಮಕೂರಿನಿಂದ ಹುಬ್ಬಳ್ಳಿಗೆ ಎಳೆನೀರನ್ನು ಹಾಕಿಕೊಂಡು ಬರುತ್ತಿರುವಾಗ ವರೂರು ಬಳಿ ಒಮ್ಮೆಲೆ ಎಕ್ಸೆಲ್ ಕಟ್ ಆಗಿ, ಲಾರಿ ಪಲ್ಟಿಯಾದ ಪರಿಣಾಮ ಲಾರಿಯಲ್ಲಿದ್ದ ಎಳೆನೀರು ರಸ್ತೆಯ ತುಂಬೆಲ್ಲಾ ಬಿದ್ದಿವೆ. ಘಟನೆಯಲ್ಲಿ ಚಾಲಕ ಹಾಗೂ ಕ್ಲಿನರ್ ಗೇ ಸಣ್ಣಪುಟ್ಟ ಗಾಯಗಳಾಗಿದ್ದು, ಹುಬ್ಬಳ್ಳಿಯ ಕೀಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಹುಬ್ಬಳ್ಳಿಯ ಗ್ರಾಮೀಣ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಬಂದಿದ್ದು ಪೊಲೀಸರಯ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ...
Kshetra Samachara
03/02/2021 01:37 pm