ಧಾರವಾಡ: ನಡು ರಸ್ತೆಯಲ್ಲೇ ಕಾರೊಂದು ಹೊತ್ತಿ ಉರಿದ ಘಟನೆ ಹುಬ್ಬಳ್ಳಿ, ಧಾರವಾಡ ರಸ್ತೆ ಮಧ್ಯೆ ಶನಿವಾರ ತಡರಾತ್ರಿ ನಡೆದಿದೆ.
ಈ ಕಾರಿಗೆ ಬೆಂಕಿ ಹತ್ತಿದ್ದು, ಸುವರ್ಣ ಪೆಟ್ರೋಲ್ ಬಂಕ್ ಬಳಿ ಎಂಬುದು ಇನ್ನೊಂದು ಆತಂಕದ ವಿಷಯ.
ಅದೃಷ್ಟವಶಾತ್ ಈ ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.
ವಾಸೀಂ ಷಾ ಕಿತ್ತೂರ ಎಂಬುವವರಿಗೆ ಸೇರಿದ ಈ ಕಾರಿನಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡಿದೆ. ನೋಡ ನೋಡುತ್ತಿದ್ದಂತೆ ಕಾರು ಧಗ ಧಗನೇ ಹೊತ್ತಿ ಉರಿಯಲಾರಂಭಿಸಿತು.
ಕೂಡಲೇ ಪೆಟ್ರೋಲ್ ಬಂಕ್ ನಲ್ಲಿದ್ದ ಸಿಬ್ಬಂದಿ ಬೆಂಕಿ ನಂದಿಸುವ ಕೆಲಸ ಮಾಡಿದ್ದಾರೆ.
Kshetra Samachara
04/10/2020 08:46 am