ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ : ಅನ್ನದಾತನ ಶೇಂಗಾ ಹೊಟ್ಟಿನ ಬಣವಿಗೆ ಬೆಂಕಿ ಇಟ್ಟ ದುಷ್ಟರು !

ಕುಂದಗೋಳ : ರೈತ ತನ್ನ ಹೊಲದಲ್ಲಿ ಶೇಖರಿಸಿಟ್ಟಿದ್ದ ಶೇಂಗಾ ಹೊಟ್ಟಿನ ಬಣವಿಗೆ ದುಷ್ಕರ್ಮಿಗಳು ಬೆಂಕಿ ಇಟ್ಟಿದ್ದಾರೆ.

ಪರಿಣಾಮ ಬರೋಬ್ಬರಿ ನಾಲ್ಕು ಎಕರೆ ಹೊಲದಲ್ಲಿ ಬೆಳೆದ ಶೇಂಗಾ ಹೊಟ್ಟು ಬೆಂಕಿಗೆ ಆಹುತಿಯಾಗಿದೆ. ಈ ಘಟನೆ ನಿನ್ನೆ ಮಧ್ಯಾಹ್ನ ಹಿರೇಹರಕುಣಿ ಗ್ರಾಮದಲ್ಲಿ ನಡೆದಿದೆ.

ಕುಂದಗೋಳ ತಾಲೂಕಿನ ಹಿರೇಹರಕುಣಿ ಗ್ರಾಮದ ರೈತ ಸಹದೇವಪ್ಪಾ ಗಂಗಣ್ಣನವರ ಎಂಬ ರೈತ ಸಂಶಿ ಮತ್ತು ಹಿರೇಹರಕುಣಿ ಗ್ರಾಮದ ನಡುವಿನ ತನ್ನ ಬಾಬತ್ತಿನ ಹೊಲದಲ್ಲಿ ಶೇಖರಿಸಿ ಇಟ್ಟಿದ್ದ ಶೇಂಗಾ ಹೊಟ್ಟಿನ ಬಣವಿಗೆ ಯಾರೋ ದುಷ್ಕರ್ಮಿಗಳು ಬೆಂಕಿ ಇಟ್ಟಿದ್ದಾರೆ. ಪರಿಣಾಮ ಬಣವಿ ಸಂಪೂರ್ಣ ಬೆಂಕಿಗೆ ಆಹುತಿಯಾಗಿದೆ.

ಅಕ್ಕ ಪಕ್ಕದ ಹೊಲದವರು ರಸ್ತೆ ಸಂಚಾರಿಗಳು ಹೊಲದಲ್ಲಿ ಬೆಂಕಿ ಕಾಣಿಸಿದ್ದನ್ನ ಗಮನಿಸಿ ರೈತನಿಗೆ ವಿಷಯ ತಿಳಿಸಿ ಬೆಂಕಿ ನಂದಿಸಲು ಯತ್ನಿಸಿ ವಿಫಲವಾಗಿದ್ದಾರೆ. ದನ ಕರುಗಳು ತಿನ್ನುವ ಹೊಟ್ಟು ಬೆಂಕಿಗೆ ಆಹುತಿಯಾದ ಪರಿಣಾಮ ಸ್ದಳೀಯರು ರೈತನಿಗೆ ಪರಿಹಾರ ನೀಡಲು ಮನವಿ ಮಾಡಿದ್ದಾರೆ.

Edited By : Manjunath H D
Kshetra Samachara

Kshetra Samachara

16/12/2020 10:45 am

Cinque Terre

51.08 K

Cinque Terre

0

ಸಂಬಂಧಿತ ಸುದ್ದಿ