ಕುಂದಗೋಳ : ಕೆಎಸ್ಸಾರ್ಟಿಸಿ ಬಸ್ ಚಾಲಕನ ಅತಿ ವೇಗದ ರಾಂಗ್ ಸೈಡ್ ಚಾಲನೆಯಿಂದ ಬಸ್ ಹಾಗೂ ಬೈಕ್ ನಡುವೆ ಭೀಕರ ಅಪಘಾತ ಸಂಭವಿಸಿದ ಘಟನೆ ಹುಬ್ಬಳ್ಳಿ ಲಕ್ಷ್ಮೇಶ್ವರ ರಾಜ್ಯ ಹೆದ್ದಾರಿಯ ಶಿರೂರು ಗ್ರಾಮದ ಹತ್ತಿರ ಬೆಣ್ಣೆಹಳ್ಳದ ಬ್ರೀಡ್ಜ್ ಬಳಿ ನಡೆದಿದೆ.
ಲಕ್ಷ್ಮೇಶ್ವರದಿಂದ ಹುಬ್ಬಳ್ಳಿಗೆ ಹೊರಟಿದ್ದ ಕೆಎ- 25 ಎಫ್-3025 ವಾಹನ ಸಂಖ್ಯೆ ಬಸ್ ಚಾಲಕ ವೇಗವಾಗಿ ರಾಂಗ್ ಸೈಡ್ ನಲ್ಲಿ ಬಸ್ ಚಲಾಯಿಸಿ ಕುಂದಗೋಳದಿಂದ ಶಿರೂರು ಮಾರ್ಗ ಬರುತ್ತಿದ್ದ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಅರುಣ್ ಎಂಬಾತ ಹಾಗೂ ಹಿಂಬದಿ ಸವಾರ ಗಂಗಯ್ಯ ಚನ್ನವೀರಯ್ಯ ಕುಂದಗೋಳ ಇವರಿಗೆ ತೀವ್ರ ಗಾಯವಾಗಿದ್ದು ಕುಂದಗೋಳ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಈ ಕುರಿತು ಕುಂದಗೋಳ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Kshetra Samachara
28/11/2020 08:31 am