ಕಲಘಟಗಿ: ತಾಲೂಕಿನ ಬಮ್ಮಿಗಟ್ಟಿ ಗ್ರಾಮದಲ್ಲಿ ರೈತ ಸಂಗ್ರಹಿಸಿಟ್ಟಿದ್ದ ಗೋವಿನ ಜೋಳದ ಬೆಳೆಯ ಬಣವೆಗೆ ಆಕಸ್ಮಿಕ ಬೆಂಕಿ ತಗುಲಿ ಅಪಾರ ನಷ್ಟ ಉಂಟಾದ ಘಟನೆ ಸಂಭವಿಸಿದೆ.
ಗ್ರಾಮದ ರೈತ ಈರಯ್ಯ ನೆಲ್ಲೂರ ಹಿರೇಮಠ ಸುಮಾರು ಮೂರು ಎಕರೆಯಲ್ಲಿ ಬೆಳೆದ ಗೋವಿನ ಜೋಳದ ಬಣವೆಗೆ ಹಾಗೂ ಹೊಲದಲ್ಲಿನ ಪೈಪ್ ಗಳಿಗೆ ಆಕಸ್ಮಿಕ ಬೆಂಕಿ ಬಿದ್ದು,ಸಂಪೂರ್ಣ ಸುಟ್ಟು ಕರಕಲಾಗಿವೆ.
ಅಂದಾಜು ಒಂದೂವರೆ ಲಕ್ಷ ರೂಪಾಯಿ ನಷ್ಟ ಉಂಟಾಗಿದೆ.ಅಗ್ನಿಶಾಮ ಸಿಬ್ಬಂದಿ ಬೆಂಕಿನಂದಿಸಿದ್ದಾರೆ.ಗ್ರಾಮ ಲೆಕ್ಕಾಧಿಕಾರಿ ಮಾಹಿತಿ ಪಡೆದಿದ್ದಾರೆ.
Kshetra Samachara
25/11/2020 11:44 am