ಹುಬ್ಬಳ್ಳಿ: ನಿನ್ನೆ ರಾತ್ರಿ ನಡೆದ ಕಾರು ಅಪಘಾತದಲ್ಲಿ ಇಬ್ಬರು ಸಾವನ್ನಪ್ಪಿದ್ದು,ಈ ಕುರಿತು ಮಾಜಿ ಸಚಿವ ಕಣ್ಣೀರು ಹಾಕಿದ್ದಾರೆ.
ನಿನ್ನೆ ರಾತ್ರಿ ವೇಳೆ ಬಂಡಿವಾಡದಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಇಬ್ಬರು ಸಾವನ್ನಪ್ಪಿದ್ದು,ಅದರಲ್ಲಿ ಮಾಜಿ ಸಚಿವೆ ಉಮಾಶ್ರೀಯವರ ಕಾರು ಕೂಡ ಇತ್ತು ಎಂದು ತಿಳಿದು ಬಂದಿದ್ದು,ಈ ಕುರಿತು ಉಮಾಶ್ರೀ ತೀವ್ರ ನೋವನ್ನು ವ್ಯಕ್ತಪಡಿಸಿದರು.
ನನ್ನ ವಾಹನ ಜಖಂಗೊಂಡಿರೋದಕ್ಕೆ ಬೇಸರವಿಲ್ಲ. ಈ ಅಪಘಾತದಲ್ಲಿ ಇಬ್ಬರ ಪ್ರಾಣಗಳು ಹೋದವಲ್ಲಾ ಅದರಿಂದ ತುಂಬಾ ನೋವಾಗ್ತಿದೆ. ಇಂತಹ ಕಾರುಗಳು ಬರಬಹುದು ಹೋಗಬಹುದು ಆದರೇ ಕಳೆದುಕೊಂಡ ಜೀವ ಮರಳಿ ಬರುವುದಿಲ್ಲ ಎಂದು ಕಣ್ಣೀರು ಸುರಿಸಿದ್ದಾರೆ.
ಕೊಪ್ಪಳ ಮೂಲದ ಚಾಲಕ ಇಲ್ಲಿಗೆ ಬಂದಿದ್ದು ಯಾಕೆ ಎಂಬುದು ಗೊತ್ತಿಲ್ಲ. ಆತನನ್ನ ನನ್ನ ಕಾರ್ಯಕರ್ತರೇ ಪರಿಚಯಿಸಿ ಕಳಿಸಿದ್ದರು. ಇಡೀ ಘಟನೆಯಿಂದ ನಾನು ನೊಂದಿದ್ದೇನೆ ಎಂದರು.
Kshetra Samachara
21/11/2020 01:12 pm