ಧಾರವಾಡ: ಇಟ್ಟಿಗೆಗಳನ್ನು ತೆಗೆದುಕೊಂಡು ಹೊರಟಿದ್ದ ಲಾರಿಯೊಂದು ಸರಣಿ ಅಪಘಾತ ಮಾಡಿರುವ ಘಟನೆ ಧಾರವಾಡದ ನುಗ್ಗಿಕೇರಿ ಬಳಿ ನಡೆದಿದೆ.
ಇಟ್ಟಿಗೆಗಳನ್ನು ತೆಗೆದುಕೊಂಡು ಹೊರಟಿದ್ದ ಈ ಲಾರಿ ಕಲಘಟಗಿ ರಸ್ತೆಯಲ್ಲಿ ಬಳ್ಳಾರಿ ಮೂಲದ ಪ್ರಭುಲಿಂಗಸ್ವಾಮಿ ಅವರಿಗೆ ಸೇರಿದ ಕಾರಿಗೆ ಡಿಕ್ಕಿ ಹೊಡೆದು, ನಂತರ ಮಾರುತಿ ಗೇವಡೆ ಅವರಿಗೆ ಸೇರಿದ ಸ್ಕೂಟರ್ ಸೇರಿದಂತೆ ಒಟ್ಟು ಐದು ಬೈಕುಗಳಿಗೆ ಗುದ್ದಿದೆ.
ಲಾರಿ ವೇಗವಾಗಿ ಬಂದು ವಾಹನಗಳಿಗೆ ಡಿಕ್ಕಿ ಹೊಡೆಯುತ್ತ ಮರಕ್ಕೆ ಬಂದು ಡಿಕ್ಕಿ ಹೊಡೆದು ಅಲ್ಲಿಯೇ ನಿಂತಿದೆ. ತಮ್ಮ ವಾಹನದ ಬಳಿ ನಿಂತಿದ್ದ ಕೆಲವರು ಲಾರಿ ಅಡ್ಡಾದಿಡ್ಡಿಯಾಗಿ ಬರುತ್ತಿರುವುದನ್ನು ನೋಡಿ ಓಡಿ ಹೋಗಿದ್ದಾರೆ.
ಈ ಸಂಬಂಧ ಧಾರವಾಡದ ಸಂಚಾರ ಠಾಣೆಯಲ್ಲಿ ದೂರು ದಾಖಲಾಗಿದೆ.
Kshetra Samachara
07/11/2020 04:20 pm