ಕಲಘಟಗಿ:ತಾಲೂಕಿನ ಗುಡಿಹಾಳ ಕ್ರಾಸ್ ಹತ್ತಿರ ಕಲಘಟಗಿ-ಧಾರವಾಡ ರಸ್ತೆಯಲ್ಲಿ ಭೀಕರ ಅಪಘಾತದಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ.
ಮೃತರನ್ನು ತಾಲೂಕಿನ ಬೋಗೆನಾಗರಕೊಪ್ಪ ಗ್ರಾಮದ ಕೂಲಿ ಕೆಲಸಗಾರರಾದ ಮೌಲಾಸಾಬ ಇಮಾಮಸಾಬ್ ಪಕ್ರಸಾಬ್ ದೊಡಮನಿ (50) ಹಾಗೂ ಅದೇ ಗ್ರಾಮದ ಕೈರುಸಾಬ ಕುಂಕೂರ (48) ಎಂದು ಗುರುತಿಸಲಾಗಿದೆ.ಬೋಗೆನಾಗರಕೊಪ್ಪ ಗ್ರಾಮದ ಸಾಧಿಕ ಅಂಕಲಿ (20),ಅಶ್ಪಾಕ್ ಕುಸುಗಲ್ (30) ಎಂಬರು ಗಂಭೀರ ಗಾಯಗೊಂಡಿದ್ದು, ಹುಬ್ಬಳ್ಳಿ ಕಿಮ್ಸ್ ಚಿಕಿತ್ಸೆಗೆ ದಾಖಲಿಸಲಾಗಿದೆ.ಪೊಲೀಸ್ ಪ್ರಕರಣ ದಾಖಲಾಗಿದೆ.
Kshetra Samachara
06/11/2020 08:46 pm