ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಪ್ಪು ಜ್ವರ ಅಥವಾ ‘ಕಾಲಾ-ಅಜರ್’ : ಈ ರೋಗ ಲಕ್ಷಣಗಳು ಇವೇ ನೋಡಿ

ಕೊಲ್ಕತ್ತಾ: ಡೆಡ್ಲಿ ಸೋಂಕು ಕೊರೊನಾದಿಂದ ದೇಶ ಸಾಕಷ್ಟು ಕಂಗೆಟ್ಟಿದೆ. ಇದರ ಮಧ್ಯೆ ಪ.ಬಂಗಾಳದ 11 ಜಿಲ್ಲೆಗಳಲ್ಲಿ ಕಪ್ಪು ಜ್ವರ ಅಥವಾ ‘ಕಾಲಾ-ಅಜರ್’ಕಾಡುತ್ತಿದೆ.ಇದು ಕೂಡಾ ಕೊರೊನಾ ಸೋಂಕಿನ ನಂತರ ಭಾರತದಲ್ಲಿ ಅದರ ರೂಪಾಂತರಿ ವೈರಸಾಗಿದೆ. ಆದರೆ ಈ ಕಾಯಿಲೆ ಕೊರೊನಾದಷ್ಟು ಪರಿಣಾಮಕಾರಿಯಾಗಿಲ್ಲ ಎಂಬುದು ಖುಷಿ ವಿಚಾರವಾಗಿದೆ.

ಆದರೆ ಕಳೆದ ಎರಡು ವಾರಗಳಲ್ಲಿ, ಪಶ್ಚಿಮ ಬಂಗಾಳದ ಹನ್ನೊಂದು ಜಿಲ್ಲೆಗಳ ಜನರಿಗೆ ಹೆಚ್ಚಾಗಿ ಕಪ್ಪು ಜ್ವರ ಅಥವಾ ‘ಕಾಲಾ-ಅಜರ್’ ಕಾಣಿಸಿಕೊಳ್ಳುತ್ತಿದೆ. ಈ ರೋಗದ ಲಕ್ಷಣಗಳ ಬಗ್ಗೆ ಆರೋಗ್ಯ ಇಲಾಖೆ ಆತಂಕ ವ್ಯಕ್ತಪಡಿಸಿದೆ.ಒಳಾಂಗಗಳ ಲೀಶ್ಮೇನಿಯಾಸಿಸ್(VL), ಇದನ್ನು ಕಾಲಾ-ಅಜರ್ ಎಂದೂ ಕರೆಯುತ್ತಾರೆ. ಇದಕ್ಕೆ ಚಿಕಿತ್ಸೆ ನೀಡದೆ ಬಿಟ್ಟರೆ ಮಾರಣಾಂತಿಕ ಕಾಯಿಲೆಯಾಗುವ ಸಂಭವಿರುತ್ತೆ.

ಈ ರೋಗದ ಲಕ್ಷಣ ಎಂದರೆ : ಅನಿಯಮಿತ ಜ್ವರ, ತೂಕ ನಷ್ಟ, ಗುಲ್ಮ ಮತ್ತು ಯಕೃತ್ತಿನ ಹಿಗ್ಗುವಿಕೆ ಮತ್ತು ರಕ್ತಹೀನತೆ. ಬ್ರೆಜಿಲ್, ಪೂರ್ವ ಆಫ್ರಿಕಾ ಮತ್ತು ಭಾರತದಲ್ಲಿ ಹೆಚ್ಚಿನ ಕಾಲಾ-ಅಜರ್ ಪ್ರಕರಣಗಳು ಕಾಣಿಸಿಕೊಂಡಿದೆ. ಕಾಲಾ-ಅಜರ್ ಮರಣದ ಸಂಭಾವ್ಯತೆ ಕಡಿಮೆ ಇದ್ದು ಪರಾವಲಂಬಿ ಸೋಂಕಿನಲ್ಲಿ ಒಂದಾಗಿದೆ.

Edited By : Nirmala Aralikatti
PublicNext

PublicNext

16/07/2022 03:42 pm

Cinque Terre

18.9 K

Cinque Terre

0

ಸಂಬಂಧಿತ ಸುದ್ದಿ