ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

‘ಮೈಗ್ರೇನ್’ ಗೆ ಮನೆ ಮದ್ದು…..!

ಮೈಗ್ರೇನ್, ತಲೆನೋವಿನ ಕಿರಿಕಿರಿ ಬಹಳಷ್ಟು ಮಂದಿಯನ್ನು ಕಾಡುತ್ತಿರುತ್ತದೆ. ಸದ್ಯ ಈ ನೋವಿನ ತೀವ್ರತೆಯನ್ನು ಕಡಿಮೆ ಮಾಡಬಲ್ಲ ಕೆಲವಷ್ಟು ಮನೆಮದ್ದುಗಳು ಇಲ್ಲಿವೆ.

ಒತ್ತಡದಿಂದ ಸಾಧ್ಯವಾದಷ್ಟು ದೂರವಿರಿ. ಬದುಕಿನಲ್ಲಿ ಎದುರಾಗಿದ್ದೆಲ್ಲವನ್ನೂ ಸಲೀಸಾಗಿ ಎದುರಿಸುವುದನ್ನು ಕಲಿಯಿರಿ. ಮೈಗ್ರೇನ್ ಗೆ ತುಪ್ಪ ಅತ್ಯುತ್ತಮ ಮದ್ದು. ತುಪ್ಪವನ್ನು ಕರಗಿಸಿ 2 ಹನಿ ತುಪ್ಪವನ್ನು ಮೂಗಿನ ಹೊಳ್ಳೆಗೆ ಬಿಡಿ. ದಿನದಲ್ಲಿ ಎರಡು ಬಾರಿ ಹೀಗೆ ಮಾಡಿದರೆ ಸಾಕು ಮೈಗ್ರೇನ್ ಕಡಿಮೆಯಾಗುತ್ತದೆ.

ತುಪ್ಪದಲ್ಲಿ ಕಡಿಮೆ ಕೊಬ್ಬು ಇದ್ದು ಬೇಗ ಜೀರ್ಣವಾಗುತ್ತದೆ. ದೇಹ ತೂಕ ಇಳಿಸಲು ಮತ್ತು ಮೆದುಳನ್ನು ಚಟುವಟಿಕೆಯಿಂದ ಇಡಲು ನೆರವಾಗುತ್ತದೆ.

ದಿನಕ್ಕೆ ಕನಿಷ್ಠ ಮೂರರಿಂದ ನಾಲ್ಕು ಲೀಟರ್ ನೀರು ಕುಡಿದರೆ ಮೈಗ್ರೇನ್ ಬರದಂತೆ ನೋಡಿಕೊಳ್ಳಬಹುದು. ನಿರ್ಜಲೀಕರಣ ತಲೆನೋವಿಗೆ ಪ್ರಮುಖ ಕಾರಣ. ಪ್ರತಿನಿತ್ಯ ಏಳರಿಂದ ಎಂಟು ಗಂಟೆ ನಿದ್ದೆ ಮಾಡಿ. ನಿದ್ದೆ ಕಡಿಮೆಯಾದಂತೆ ಮೈಗ್ರೇನ್ ಅಪಾಯ ಹೆಚ್ಚು. ನಿತ್ಯ ಅರ್ಧಗಂಟೆಯನ್ನು ವ್ಯಾಯಾಮಕ್ಕಾಗಿ ಮೀಸಲಿಡಿ. ಸಮಯಕ್ಕೆ ಸರಿಯಾಗಿ ಊಟ ತಿಂಡಿ ಸೇವಿಸುವುದರಿಂದ ಮೈಗ್ರೇನ್ ಸಮಸ್ಯೆಯಿಂದ ದೂರವಿರಬಹುದು.

Edited By : Nirmala Aralikatti
PublicNext

PublicNext

28/06/2022 01:08 pm

Cinque Terre

26.52 K

Cinque Terre

0