ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪ್ರತಿಭಟನೆ ಬಿಡಿ ಯೋಗ ಮಾಡಿ : ಬಾಬಾ ರಾಮ್ ದೇವ್

ನವದೆಹಲಿ : ದೇಶದಲ್ಲಿ ಅಗ್ನಿಪಥ್ ಯೋಜನೆಯ ವಿರುದ್ಧ ಹಿಂಸಾತ್ಮಕ ಪ್ರತಿಭಟನೆ ಮಾಡುತ್ತಿದೆ. ಇದರ ಮಧ್ಯೆ ಯೋಗ ಗುರು ಬಾಬಾ ರಾಮ್ದೇ ವ್ ಸಲಹೆವೊಂದನ್ನು ನೀಡಿದ್ದಾರೆ.ಪ್ರತಿಭಟನಾಕಾರರು ಪ್ರತಿಭಟನೆ ಮಾಡುವ ಬದಲು ಯೋಗ ಮಾಡಬೇಕು ಎಂದಿದ್ದಾರೆ.

ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಅಗ್ನಿಪಥ್ ಪ್ರತಿಭಟನಕಾರರು ಯೋಗ ಮಾಡಿದ್ದರೆ, ಅವರು ಬೆಂಕಿ ಹಚ್ಚುವ ಪ್ರಯತ್ನ ಮಾಡುತ್ತಿರಲಿಲ್ಲ. ಪ್ರತಿಭಟನೆಯನ್ನು ಬಿಟ್ಟು ಅವರು ಯೋಗವನ್ನು ಮಾಡಬೇಕಾಗಿತ್ತು ಎಂದ ಅವರು, ರಾಜಕೀಯದಲ್ಲಿ ಯೋಗ ಇರಬೇಕು, ಆದರೆ ಯೋಗದಲ್ಲಿ ರಾಜಕೀಯ ಇರಬಾರದು ಎಂದಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರನ್ನು ಅಧಿಕಾರದಿಂದ ತೆಗೆದು ಹಾಕಲು ದೇಶದಲ್ಲಿ ಕೆಲವರು ಈ ರೀತಿ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು. ಯೋಗವು ಸ್ವಯಂ ಶಿಸ್ತು ಮತ್ತು ಸ್ವಯಂ ಪ್ರೇರಣೆಯಾಗಿದೆ. ದೈಹಿಕವಾಗಿ ಮತ್ತು ಮಾನಸಿಕವಾಗಿ ಸದೃಢವಾಗಿರುವುದು ಮತ್ತು ನಿಮ್ಮ ಮನಸ್ಸು, ಆಲೋಚನೆಗಳು ಮತ್ತು ಭಾವನೆಗಳನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವುದು ಯೋಗವಾಗಿದೆ ಎಂದರು.

Edited By : Nirmala Aralikatti
PublicNext

PublicNext

23/06/2022 01:50 pm

Cinque Terre

24.63 K

Cinque Terre

9