ಶಿವಮೊಗ್ಗ: ಎರಡು ಗಂಡು ಎರಡು ಹೆಣ್ಣು ಒಟ್ಟು ನಾಲ್ಕು ಮಕ್ಕಳಿಗೆ 22 ವರ್ಷದ ಯುವತಿಯೊಬ್ಬಳು ಜನ್ಮ ನೀಡಿ ಮಹಾತಾಯಿಯಾಗಿದ್ದಾಳೆ.ಹೌದು ಈ ಮುದ್ದಾದ ನಾಲ್ಕು ಮಕ್ಕಳಿಗೆ ಜನ್ಮ ನೀಡಿದ ಆಲ್ಮಾಸ್ ಬಾನು ಮತ್ತು ಮಕ್ಕಳು ಆರೋಗ್ಯದಿಂದ ಇರುವುದಾಗಿ ಆಸ್ಪತ್ರೆ ಮೂಲಗಳು ತಿಳಿಸಿವೆ.
ಖಾಸಗಿ ಆಸ್ಪತ್ರೆಯೊಂದರಲ್ಲಿ ಸಿಸೇರಿಯನ್ ಮೂಲಕ ಹೆರಿಗೆ ಮಾಡಿಸಲಾಗಿದೆ. ಭದ್ರಾವತಿ ತಾಲೂಕ ತಡಸಾ ಗ್ರಾಮದ ಆಲ್ಮಾಸ್ ಬಾನು ಇಂದು ಬೆಳಗ್ಗೆ ಹೆರಿಗೆ ನೋವಿನಿಂದ ಸರ್ಜಿ ಆಸ್ಪತ್ರೆಗೆ ದಾಖಲಾಗಿದ್ದರು. ವೈದ್ಯರು ಸಿಸೇರಿಯನ್ ಮೂಲಕ ಹೆರಿಗೆ ಮಾಡಿಸಿದ್ದಾರೆ.
ನಾಲ್ವರು ಮಕ್ಕಳ ಪೈಕಿ ಒಂದೊಂದು ಮಗು 1.1 ಕೆಜಿ , 1.2 ಕೆಜಿ, 1.3 ಕೆಜಿ 1.8 ಕೆಜಿ ತೂಕ ಹೊಂದಿವೆ. ಆದರೆ, ನಾಲ್ಕೂ ಮಕ್ಕಳಿಗೂ ಸ್ವಲ್ಪ ಪ್ರಮಾಣದ ಉಸಿರಾಟದ ಸಮಸ್ಯೆಯಿದೆ. ಹಾಗಾಗಿ 2 ಮಕ್ಕಳಿಗೆ ಸಿ ಪ್ಯಾಪ್ ಅಳವಡಿಸಲಾಗಿದೆ.ಇನ್ನೆರಡು ಮಕ್ಕಳಿಗೆ ಕೃತಕ ಆಕ್ಸಿಜನ್ ವ್ಯವಸ್ಥೆ ಮಾಡಲಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.
PublicNext
23/05/2022 10:44 pm