ಕಣ್ಣು ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿವಹಿಸಬೇಕು. ದೇಹದ ಇತರ ಅಂಗಾಂಗಗಳಲ್ಲಿ ಕಣ್ಣು ಬಹು ಮುಖ್ಯವಾದ ಅಂಗ. ಇಂದಿನ ಡಿಜಿಟಲ್ ಯುಗದಲ್ಲಿ ಗ್ಯಾಜೆಟ್ ಗಳ ವೀಕ್ಷಣೆಯಿಂದ ಕಣ್ಣುಗಳ ಮೇಲೆ ದುಷ್ಫರಿಣಾಮಗಳು ಬೀರುತ್ತವೆ. ದೃಷ್ಟಿ ಹೀನದಂತಹ ಸಮಸ್ಯೆ ಶುರುವಾಗುತ್ತವೆ.
ಹೀಗೆ ನಯನಗಳನ್ನು ಆರೋಗ್ಯವಾಗಿಡಲು ಕೆಳಗೆ ನೀಡಲಾದ ಸಲಹೆಗಳನ್ನು ಅನುಸರಿಸಬಹುದು.
ಪೌಷ್ಟಿಕ ಆಹಾರ ಸೇವಿಸಿ: ಜೀವಸತ್ವಗಳು, ಖನಿಜಗಳು ಮತ್ತು ಪೋಷಕಾಂಶ ಸಮೃದ್ಧವಾಗಿರುವ ಆಹಾರವನ್ನು ಸೇವಿಸುವುದು
ಕ್ಯಾರೊಟಿನಾಯ್ಡ್ ಗಳು ಕಣ್ಣುಗಳಿಗೆ ಪ್ರಯೋಜನಕಾರಿ: ಕಣ್ಣಿನ ದೃಷ್ಟಿ ಹೆಚ್ಚಿಸಲು, ಕ್ಯಾರೋಟಿನ್ ಹೊಂದಿರುವ ವಸ್ತುಗಳನ್ನು ಸೇವಿಸಬೇಕು. ಇದು ನಮ್ಮ ರೆಟಿನಾದಲ್ಲಿ ಇರುವ ಕ್ಯಾರೊಟಿನಾಯ್ಡ್ ಗಳಲ್ಲಿರುವ ಲುಟೀನ್ ಮತ್ತು ಕ್ಸಾಂಥೈನ್ ಅನ್ನು ಹೆಚ್ಚಿಸುತ್ತದೆ.
ಕ್ಯಾರೋಟಿನಾಯ್ಡ್ ಗಳನ್ನು ಪಡೆಯಲು ಹಸಿರು ಎಲೆಗಳ ತರಕಾರಿಗಳು ಮತ್ತು ಮೊಟ್ಟೆಗಳನ್ನು ಹೆಚ್ಚಾಗಿ ಸೇವಿಸಿ.
ಕಣ್ಣುಗಳ ಸುರಕ್ಷತೆ: ಮೊಬೈಲ್ ಹಾಗೂ ಲ್ಯಾಪ್ ಟಾಪ್ ಬಳಸುವಾಗ ಕಂಪ್ಯೂಟರ್ ಗ್ಲಾಸ್ ಗಳ ಬಳಕೆ ಅವಶ್ಯ.
ಬಿಸಿಲಿಗೆ ಕಾಲಿಡುವ ಮುನ್ನ ಸನ್ ಗ್ಲಾಸ್ ಧರಿಸಿ. UV A ಮತ್ತು UV B ಯ ಹಾನಿಕಾರಕ ಕಿರಣಗಳಿಂದ ನಿಮ್ಮ ಕಣ್ಣುಗಳನ್ನು ರಕ್ಷಿಸಲು ಇಂತಹ ಸನ್ ಗ್ಲಾಸ್ ಗಳು ಅತ್ಯಗತ್ಯ.
20-20-20 ನಿಯಮ ಅನುಸರಿಸಿ: ಕಂಪ್ಯೂಟರ್ ನಲ್ಲಿ ಕೆಲಸ ಮಾಡುವಾಗ 20-20-20 ಸೂತ್ರವನ್ನು ಅನುಸರಿಸಿ. ಇದರರ್ಥ ಪ್ರತಿ ನಿಮಿಷವೂ ನಿಮ್ಮ ಕಣ್ಣುಗಳಿಂದ 20 ಅಡಿ ದೂರದಲ್ಲಿರುವ ಯಾವುದನ್ನಾದರೂ 20 ಸೆಕೆಂಡುಗಳ ಕಾಲ ನೋಡಿ. ಇದರಿಂದ ಸಮಯಕ್ಕೆ ಸರಿಯಾಗಿ ವಿರಾಮಗಳನ್ನು ತೆಗೆದುಕೊಳ್ಳುವ ಮೂಲಕ ನೀವು ಕಣ್ಣಿನ ಒತ್ತಡವನ್ನು ಕಡಿಮೆ ಮಾಡಬಹುದು.
PublicNext
11/05/2022 05:28 pm