ಬೆಂಗಳೂರು: ತೈಲ ಬೆಲೆ ಏರಿಕೆ ಆಯಿತು.ಅಡಿಗೆ ಅನಿಲ ರೇಡ್ ಜಾಸ್ತಿ ಆಗಿದೆ. ಈಗ ಔಷಧಿಗಳ ಬೆಲೆನೂ ಏರುತ್ತಿದೆ. ಪ್ಯಾರಾಸಿಟಮೋಲ್ ಸೇರಿದಂತೆ ಅಗತ್ಯ ಔಷಧಿಗಳ ಬೆಲೆ ಶೇಕಡ 10.7 ರಷ್ಟು ಏರಿಕೆ ಆಗಿದೆ.
ಹೌದು. ಇದು ದಿ ರೂಮರ್ ಅಲ್ಲವೇ ಅಲ್ಲ. ನ್ಯಾಷನಲ್ ಫಾರ್ಮಾಸಿಟಿಲ್ ಪ್ರೈಸಿಂಗ್ ಅಥಾರಿಟಿ ಆಫ್ ಇಂಡಿಯಾ ಇದನ್ನ ಅಧಿಕೃತವಾಗಿಯೇ ಈಗ ಇದನ್ನ ಹೇಳಿಕೊಂಡಿದೆ.
ಪಾರಾಸಿಟಮೋಲ್ ಸೇರಿದಂತೆ ಸಾಮಾನ್ಯ ಕಾಯಿಲೆಗಳಿಗೆ ಬಳಸುವ 800ಕ್ಕೂ ಅಧಿಕ ಔಷಧಿಗಳ ಬೆಲೆ ಹೆಚ್ಚಾಗುತ್ತಿದೆ. ಏಪ್ರಿಲ್ ತಿಂಗಳಿನಿಂದಲೇ ಇದು ಜಾರಿಗೆ ಬರುತ್ತಿದೆ.
ಔಷಧಿಗಳ ಹೋಲ್ ಸೇಲ್ ಬೆಲೆ ಶೇಕಡರ 10.7 ರಷ್ಟು ಏರಿಕೆ ಆಗಿದೆ. ರಿಟೇಲ್ ಬೆಲೆ ಶೇಕಡ 17 ರಷ್ಟು ಹೆಚ್ಚಾಗಿದೆ.
PublicNext
26/03/2022 08:58 pm