ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನಗರದಲ್ಲಿ ಹೆಚ್ಚಾಗಿದೆ ಗ್ಲಾಕೋಮಾ ಗಂಡಾಂತರ: ಕಣ್ಣಿನ ಆರೋಗ್ಯಕ್ಕೆ ಹೀಗೆ ಮಾಡಿ

ಕಣ್ಣು ಒಬ್ಬ ಮನುಷ್ಯನಿಗೆ ಎಷ್ಟು ಅವಶ್ಯಕ. ಕಣ್ಣುಗಳು ಮನುಷ್ಯನ ಅತ್ಯಂತ ಸೂಕ್ಷ್ಮವಾದ ಅಂಗ. ಆದರೆ ಈಗ ಕೋವಿಡ್ ಮುಗಿದ ಮೇಲೆ ಗ್ಲಾಕೋಮಾ ಗಂಡಾಂತರ ಎದುರಾಗಿದೆ. ಶೇ.90ರಷ್ಟು ಜನರು ಗ್ಲಾಕೋಮಾದಿಂದ ಬಾಳಲಾಟ ನಡೆಸುತ್ತಿದ್ದಾರೆ. ಕೋವಿಡ್ ಸಾಂಕ್ರಾಮಿಕ ರೋಗದ ಸಂದರ್ಭದಲ್ಲಿ ನೇತ್ರಾ ತಪಾಸಣೆಗೆ ಒಳಗಾದ ಕೆಲವು ರೋಗಿಗಳಲ್ಲಿ ದೃಷ್ಟಿ ಹಿನ್ನಲೆ ಸಮಸ್ಯೆ ಉಲ್ಬಣಗೊಳ್ಳುತ್ತಿದೆ. ಹಿರಿಯರಲ್ಲಿ ಕುರುಡುತನಕ್ಕೆ ಗ್ಲಾಕೋಮಾ ಕೂಡ ಒಂದು ಕಾರಣ. ಆದರೆ ಈಗ ಸಾಕಷ್ಟು ಮಂದಿಯಲ್ಲಿ ಗ್ಲಾಕೋಮಾ ಇದೆ. ಈ ರೋಗ ಇರುವುದು ವ್ಯಕ್ತಿಗೆ ಗೊತ್ತಾಗುವುದಿಲ್ಲ. ರೋಗದ ಲಕ್ಷಣವು ಕಾಣುವುದಿಲ್ಲ. ಆದರೆ ಒಳಗಿನಿಂದ ಕಣ್ಣಿನ ದೃಷ್ಟಿ ಹಿನ್ನತೆಯನ್ನ ಕುಂಠಿತವಾಗುತ್ತದೆ.

ಮನೆಯಲ್ಲಿಯೇ ಆನ್‌ಲೈನ್ ಮೂಲಕ ಶಾಲೆ, ಕಚೇರಿ ಕೆಲಸದಿಂದಾಗಿ ಸುದೀರ್ಘವಾಗಿ ಲ್ಯಾಪ್‌ಟಾಪ್ ಬಳಸುವುದರಿಂದ ಗ್ಲಾಕೋಮಾ ಸಮಸ್ಯೆ ಉಲ್ಬಣಿಸುತ್ತದೆ. ನಗರದಲ್ಲಿ ಡ್ರೈ ಐ ಕಣ್ಣಿನ ಸಮಸ್ಯೆ ಕೂಡ ಶೇ 30ರಷ್ಟು ಜನರಲ್ಲಿ ಉಲ್ಬಣಿಸಿದೆ. ಕೋವಿಡ್ ಪೂರ್ವದ ಸ್ಥಿತಿಗೆ ಹೋಲಿಸಿದಲ್ಲಿ ಈಗ ರೋಗಿಗಳ ಸಂಖ್ಯೆ 3 ಪಟ್ಟು ಹೆಚ್ಚಳವಾಗಿದೆ. ನಿತ್ಯ ಆಸ್ಪತ್ರೆಗೆ ಬರುವ ರೋಗಿಗಳ ಸಂಖ್ಯೆ ಕೂಡ ಹೆಚ್ಚಳವಾಗಿದೆ.

ಕಣ್ಣಿನ ಆರೋಗ್ಯಕ್ಕೆ ಹೀಗೆ ಮಾಡಿ:

* ಉತ್ತಮವಾದ ಗಾಳಿ ಬೆಳಕು ಇರುವ ಸ್ಥಳದಲ್ಲಿ ಕೆಲಸ ಮಾಡಬೇಕು

* 20 ನಿಮಿಷಗಳಿಗೊಮ್ಮೆ ದೂರದ ವಸ್ತುಗಳನ್ನ ವೀಕ್ಷಣೆ ಮಾಡಬೇಕು

* ಆಗಾಗ್ಗೆ ಕಣ್ಣನ ಮಿಟುಕಿಸುತ್ತಿರಬೇಕು

* ನಿಯಮಿತವಾಗಿ ಕಣ್ಣಿನ ಆರೋಗ್ಯ ತಪಾಸಣೆ ಮಾಡಿಸಬೇಕು

* ನಿರಂತರವಾಗಿ ಕಂಪ್ಯೂಟರ್ ಮುಂದೆ ಕೆಲಸ ಮಾಡುವುದು ಕಡಿಮೆ ಮಾಡಬೇಕು

Edited By : Vijay Kumar
PublicNext

PublicNext

20/03/2022 01:02 pm

Cinque Terre

19.48 K

Cinque Terre

0