ಹೊಸದಿಲ್ಲಿ: ಹೆಮ್ಮಾರಿ ಸೋಂಕು ಕೊರೊನಾ ಮೂರನೇ ಅಲೆಯಲ್ಲಿ ಮಕ್ಕಳು ಹೆಚ್ಚಿನ ಪ್ರಮಾಣದಲ್ಲಿ ಕೊರೊನಾ ಸೋಂಕಿಗೆ ತುತ್ತಾಗುತ್ತಿದ್ದಾರೆ ಎಂದು ದಿಲ್ಲಿ ಏಮ್ಸ್ ನ ಮಕ್ಕಳ ತೀವ್ರ ನಿಗಾ ತಜ್ಞರಾದ ಡಾ. ರಾಕೇಶ್ ಲೋಧಾ ಕಳವಳ ವ್ಯಕ್ತಪಡಿಸಿದ್ದಾರೆ.
''ಏಕಾಏಕಿಯಾಗಿ ಕೊರೊನಾ ಅಥವಾ ರೂಪಾಂತರಿಯು ನೇರವಾಗಿ ಮಕ್ಕಳನ್ನೇ ಗುರಿಯಾಗಿಸುತ್ತಿದೆ ಎಂದು ಹೇಳಲಾಗಲ್ಲ. 15 ವರ್ಷದೊಳಗಿನ ಮಕ್ಕಳಿಗೆ ದೇಶದಲ್ಲಿ ಕೊರೊನಾ ಲಸಿಕೆ ಸದ್ಯಕ್ಕೆ ಲಭ್ಯವಿಲ್ಲದ ಹಿನ್ನೆಲೆಯಲ್ಲಿ ಪೋಷಕರು ಕೊರೊನಾ ಮುನ್ನೆಚ್ಚರಿಕೆಗಳ ಪೈಕಿ ಮಾಸ್ಕ್ ಧರಿಸುವುದನ್ನು ಮಕ್ಕಳಿಗೆ ಕಡ್ಡಾಯವಾಗಿ ಅಭ್ಯಾಸ ಮಾಡಿಸಬೇಕು.
ಮಕ್ಕಳಲ್ಲಿ ಕಂಡುಬರುವ ಸೌಮ್ಯ ಲಕ್ಷಣಗಳು
ಜ್ವರ, ಗಂಟಲು ನೋವು-ಕೆರೆತ, ಮೂಗು ಸೋರುವಿಕೆ, ಕೆಮ್ಮು, ವೇಗವಾದ ಉಸಿರಾಟ, ರಕ್ತದಲ್ಲಿನ ಆಮ್ಲಜನಕ ಪ್ರಮಾಣ 90%ಗಿಂತ ಕಡಿಮೆಯಾಗುವುದು
ಚಿಕಿತ್ಸೆ
1. ಮನೆಯಲ್ಲೇ ಐಸೊಲೇಷನ್, ಪ್ಯಾರಾಸೆಟಮಾಲ್ ಸಿರಪ್ ನೀಡುವುದು, ಉಪ್ಪು ಮಿಶ್ರಿತ ಉಗುರುಬೆಚ್ಚಗಿನ ನೀರಿನಲ್ಲಿ ಆಗಾಗ್ಗೆ ಬಾಯಿ ಮುಕ್ಕಳಿಸುವುದು , ಪೌಷ್ಟಿಕಾಂಶ ಭರಿತ ಆಹಾರ ನೀಡುವುದು
2. ಹತ್ತಿರದ ವೈದ್ಯರಲ್ಲಿಗೆ ಮಕ್ಕಳನ್ನು ಕರೆದೊಯ್ದು ತಪಾಸಣೆ, ಕೆಮ್ಮು ನಿಯಂತ್ರಕ ಔಷಧ, ಅಗತ್ಯಬಿದ್ದಲ್ಲಿ ಆ್ಯಂಟಿಬಯೊಟಿಕ್ ಮಾತ್ರೆ ಪಡೆಯುವುದು.
ಅಪಾಯದ ಸೂಚನೆಗಳು
ಉಸಿರಾಟಕ್ಕೆ ತೀವ್ರ ತೊಂದರೆ, ಮುಖ ನೀಲಿಗಟ್ಟುವುದು, ಎದೆನೋವು, ನಿತ್ಯದ ಕೆಲಸಗಳನ್ನು ಮಾಡಲು ಗೊಂದಲ, ನೀರು ಕುಡಿಯಲು ಆಗದ ಸ್ಥಿತಿ, ಎಚ್ಚರವಿದ್ದರೂ ಮನೆಯವರ ಮಾತಿಗೆ ಗಮನ ಕೊಡದಿರುವುದು.
PublicNext
14/01/2022 09:35 pm