ಚಿಕ್ಕಮಗಳೂರು: ಬೆಂಗಳೂರು ಅಥವಾ ಮಂಗಳೂರಿಗೆ ಶಿರಾಡಿ ಘಾಟ್ ಮೂಲಕ ತೆರಳುವಾಗ ಕಡಿಮೆ ಬೆಲೆಗೆ ಸಿಗುವ ಗೋಡಂಬಿ ಖರೀದಿಸುವ ಮುನ್ನ ಎಚ್ಚರವಹಿಸುವುದು ಅಗತ್ಯವಾಗಿದೆ.
ಗೋಡಂಬಿ ಕೇವಲ 300 ರಿಂದ 500ರೂ. ಅಷ್ಟೇ ಎಂದು ಖರೀದಿಸುವವರೇ ಹೆಚ್ಚು. ಆದರೆ ಕೆಲವೊಮ್ಮೆ ಗೋಡಂಬಿ ಇಷ್ಟು ಕಡಿಮೆ ಬೆಲೆಗೆ ಸಿಗುತ್ತಾ ಎಂದು ಅನುಮಾನ ಮೂಡಬಹುದು. ಹೇಗೆಂದರೆ ಸ್ವಲ್ಪ ಗೋಡಂಬಿ, ಮೈದಾ ಹಾಕಿ ಮಿಶ್ರಣ ಮಾಡಿ ಅದನ್ನು ಕಬ್ಬಿನ ಜ್ಯೂಸ್ ಮೆಷಿನ್ ಹೋಲುವ ಮಿಷನ್‌ಗಳ ಅಚ್ಚುಗಳಲ್ಲಿ ಥೇಟ್ ಗೋಡಂಬಿಯಂತೆ ತಯಾರಿಸಿ ನಂತರ ಬಾಯ್ಲ್ ಮಾಡಲಾಗುತ್ತದೆ. ಇದನ್ನೇ ಕಡಿಮೆ ಬೆಲೆಗೆ ರಸ್ತೆ ಬದಿಯಲ್ಲೆಲ್ಲ ಮಾರಾಟ ಮಾಡುತ್ತಾರೆ.
ಮೈದಾ ಹಾಕಿದ ಯಾವುದೇ ಆಹಾರ ಪದಾರ್ಥ ಹೆಚ್ಚು ದಿನ ಇಟ್ಟರೆ ಹಾಳಾಗುವುದರಿಂದ ಅದನ್ನು ಆ್ಯಸಿಡ್‍ನಿಂದ ಕ್ಲೀನ್ ಮಾಡಲಾಗುತ್ತದೆ ಮತ್ತು ವಿಷಯುಕ್ತ ಕೆಮಿಕಲ್ ಬಳಸಲಾಗುತ್ತದೆ. ಇದನ್ನೇ ಅಸಲಿ ಗೋಡಂಬಿ ಎಂಬಂತೆ ಮಾರಾಟ ಮಾಡುತ್ತಾರೆ. ಇಂತಹ ಗೋಡಂಬಿ ಬಳಕೆಯಿಂದ ಕಿಡ್ನಿ, ಹಾರ್ಟ್, ಲಿವರ್‍ಗೆ ಹಾನಿಯಂತೂ ಕಟ್ಟಿಟ್ಟ ಬುತ್ತಿ. ಕೆಲವೊಮ್ಮೆ ಇವುಗಳಿಗೆ ಡ್ಯಾಮೇಜ್ ಆಗುವ ಸಾಧ್ಯತೆಯೂ ಇಲ್ಲದಿಲ್ಲ.
ಧರ್ಮಸ್ಥಳ, ಸುಬ್ರಮಣ್ಯಕ್ಕೆ ಹೋಗುವ ಬೆಂಗಳೂರು, ಮೈಸೂರು ಭಾಗದ ಪ್ರವಾಸಿಗರೇ ಇವರ ಟಾರ್ಗೆಟ್. ಹೀಗಾಗಿ ಇನ್ನುಮುಂದೆ ಶಿರಾಡಿ ಘಾಟ್‍ನಲ್ಲಿ ಗೋಡಂಬಿ ಖರೀದಿಸುವ ಮುನ್ನ ಎಚ್ಚರಿಕೆವಹಿಸುವುದು ಅಗತ್ಯವಾಗಿದೆ.
PublicNext
07/01/2022 03:22 pm