ಚಳಿಗಾಲ ಶುರುವಾಯಿತೆಂದರೆ ನೆಗಡಿ, ಕೆಮ್ಮು ಕಾಟ ಶುರುವಾಗುತ್ತದೆ. ಒಣ ಕೆಮ್ಮು ಈ ಕಾಲದ ಸ್ಪೆಷಲ್ ಎಂದೇ ಹೇಳಬಹುದು. ಆಹಾರದಲ್ಲಿ ಚೂರೇ ಚೂರು ವ್ಯತ್ಯಾಸವಾದರೂ ಒಣಕೆಮ್ಮು ಬಾಧಿಸುತ್ತದೆ.
ಈ ಒಣ ಕೆಮ್ಮಿಗೆ ಮನೆಯಲ್ಲಿಯೇ ಮದ್ದಿದೆ
•ಒಂದು ಲೋಟ ಬಿಸಿ ನೀರಿಗೆ ಕೆಂಪು ಕಲ್ಲು ಸಕ್ಕರೆ ಅಥವಾ ಸಕ್ಕರೆ ಬೆರೆಸಿ, ಅರ್ಧ ಲಿಂಬೆರಸ ಸೇರಿಸಬೇಕು. ಬಿಸಿಯಾಗಿರುವಾಗಲೇ ಕುಡಿಯಬೇಕು.
•ಕೆಂಪು ಕಲ್ಲುಸಕ್ಕರೆ ಹಾಗೂ ಒಂದು ಇಡೀ ಲಿಂಬೆ ಹಣ್ಣಿನ ರಸವನ್ನು ತೆಗೆದುಕೊಂಡು ಅದನ್ನು ಬಿಸಿ ಮಾಡುತ್ತ ಚೆನ್ನಾಗಿ ಮಿಕ್ಸ್ ಮಾಡಬೇಕು. ಎರಡು ಲವಂಗವನ್ನು ಸುಟ್ಟು ಅದಕ್ಕೆ ಹಾಕಬೇಕು. ಚೆನ್ನಾಗಿ ಮಿಕ್ಸ್ ಆದ ಬಳಿಕ ಆಗಾಗ ಒಂದು ಚಮಚ ರಸವನ್ನು ತಿಂದರೆ ಗಂಟಲು ಕಿರಿಕಿರಿ ಕಡಿಮೆಯಾಗುತ್ತದೆ.
•ಹುಳಿಮಜ್ಜಿಗೆಗೆ ಬೆಲ್ಲ ಸೇರಿಸಿ ಕುಡಿಯಬಹುದು. ಅರ್ಧ ಗ್ಲಾಸ್ ಹುಳಿಮಜ್ಜಿಗೆಗೆ ಸ್ವಲ್ಪ ನೀರು ಹಾಗೂ ಜೋನಿ ಬೆಲ್ಲ ಎರಡು ಚಮಚ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿಕೊಂಡು ಕುಡಿಯಬೇಕು.
•ದೊಡ್ಡಪತ್ರೆ ಎಲೆಯನ್ನು ಗ್ಯಾಸ್ ಒಲೆಯ ಉರಿಗೆ ಹಿಡಿದು ಬಿಸಿ ಮಾಡಿದರೆ ಅದರಿಂದ ರಸ ತೆಗೆದುಕೊಳ್ಳಬಹುದು. ಈ ರಸಕ್ಕೆ ಅರ್ಧ ಚಮಚ ತೆಂಗಿನೆಣ್ಣೆ ಮಿಕ್ಸ್ ಮಾಡಿ ಎದೆ, ಬೆನ್ನಿಗೆ ಹಚ್ಚಿ ಮಸಾಜ್ ಮಾಡಬೇಕು. ಇದರಿಂದ ಕಫ ಕರಗುವುದ.
•ಕಫದ ಸಮಸ್ಯೆ ಹೆಚ್ಚಿದ್ದರೆ ವೈದ್ಯರನ್ನು ಕಾಣಲು ಮರೆಯಬೇಡಿ.
PublicNext
23/12/2021 08:49 pm