ಬಾಗಲಕೋಟೆ: ಹಲವಾರು ತಿಂಗಳುಗಳಿಂದ ತೀವ್ರ ಹೊಟ್ಟೆ ನೋವಿನಿಂದ ಬಳಲುತ್ತಿದ್ದ ಮಹಾನಂದ ಎಂಬ ಮಹಿಳೆ ಹೊಟ್ಟೆಯಲ್ಲಿ 4 ಕೆಜಿ ಮಾಂಸದ ಗಡ್ಡೆ ಪತ್ತೆಯಾಗಿದ್ದು, ಬೀಳಗಿ ಸರ್ಕಾರಿ ಆಸ್ಪತ್ರೆ ವೈದ್ಯರು ಸತತ ಎರಡು ಘಂಟೆ ಕಾಲ ಶಸ್ತ್ರ ಚಿಕಿತ್ಸೆ ನಡೆಸಿ ಹೊರ ತೆಗೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಮಾಂಸದ ಗಡ್ಡೆ ಇರುವುದನ್ನು ಪರಿಶೀಲಿಸಿದ ಡಾ.ಪ್ರಶಾಂತ್, ಡಾ.ಪ್ರವೀಣ್, ನರ್ಸ್ ಮಹಾದೇವಿ ಸೇರಿ ಮಹಿಳೆಗೆ ಶಸ್ತ್ರಚಿಕಿತ್ಸೆ ಮಾಡಿದ್ದಾರೆ.ಶಸ್ತ್ರಚಿಕಿತ್ಸೆ ಬಳಿಕ ಮಹಿಳೆ ಸಂಪೂರ್ಣವಾಗಿ ಗುಣಮುಖಳಾಗಿದ್ದಾಳೆ.
PublicNext
26/11/2021 01:14 pm