ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ರಾತ್ರಿ ವೇಳೆ ಯಾಕೆ ಶವಪರೀಕ್ಷೆ ಮಾಡುವುದಿಲ್ಲ ಗೊತ್ತೇ?

ಕೆಲವೊಂದು ವಿಚಾರಗಳು ನಮಗೆ ಗೊತ್ತೆ ಇರುವುದಿಲ್ಲ. ಅವುಗಳನ್ನು ತಿಳಿಯಬೇಕು ಎನ್ನುವ ಕುತೂಹಲವಿರುತ್ತದೆ. ಸದ್ಯದ ವಿಷಯ ಕೂಡಾ ಅಂತಹದ್ದೇ… ವ್ಯಕ್ತಿಯೊಬ್ಬ ಮರಣ ಹೊಂದಿದಾಗ ಮೃತದೇಹದ ಮರಣೋತ್ತರ ಪರೀಕ್ಷೆ ಮಾಡುವುದು ಸಾಮಾನ್ಯ. ಸಾವಿಗೆ ಕಾರಣ ಏನೆಂಬುದನ್ನು ತಿಳಿಯಲು ಈ ಪರೀಕ್ಷೆ ಮಾಡಲಾಗುತ್ತದೆ. ಇನ್ನು ಮೃತಪಟ್ಟ 10 ಗಂಟೆ ಒಳಗೆ ಶವಪರೀಕ್ಷೆ ನಡೆಸಲಾಗುತ್ತದೆ.

ಆದರೆ ಅಚ್ಚರಿಯ ಸಂಗತಿ ಎಂದರೆ ವೈದ್ಯರು ಯಾಕೆ ಪೋಸ್ಟ್ ಮಾರ್ಟಂ ಅನ್ನು ರಾತ್ರಿ ಸಮಯದಲ್ಲಿ ಮಾಡುವುದಿಲ್ಲ ಎಂದರೆ ರಾತ್ರಿಯ ವೇಳೆ ಗಾಯದ ರಕ್ತದ ಕಲೆಯು ಟ್ಯೂಬ್ ಲೈಟ್ ಮತ್ತು ಎಲ್ ಇಡಿ ಲೈಟ್ ಗೆ ನೇರಳೆ ಬಣ್ಣದಲ್ಲಿ ಕಾಣುತ್ತದೆ. ಸೂರ್ಯನ ಬೆಳಕಿನಲ್ಲಿ ಮಾತ್ರ ಗಾಯದ ರಕ್ತದ ಕಲೆಯೂ ಕೆಂಪು ಬಣ್ಣದಲ್ಲಿ ಕಾಣುತ್ತದೆ.

ಹೀಗಾಗಿ ಫೋರೆನ್ಸಿಕ್ ವಿಜ್ಞಾನದಲ್ಲಿ ಈ ಗಾಯದ ಕಲೆಯನ್ನು ಉಲ್ಲೇಖಿಸಲು ಸಾಧ್ಯವಾಗುವುದಿಲ್ಲ. ಇದರಿಂದ ಸಾವಿಗೆ ಕಾರಣ ಏನೆಂದು ತಿಳಿಯಲು ಸಹ ಸಾಧ್ಯವಾಗುವುದಿಲ್ಲ. ಆದ್ದರಿಂದ ನ್ಯಾಯಾಲಯವೂ ಕೂಡ ರಾತ್ರಿ ಸಮಯದ ಶವಪರೀಕ್ಷೆಯನ್ನು ನಿರಾಕರಿಸುತ್ತಾರೆ.

Edited By : Nirmala Aralikatti
PublicNext

PublicNext

14/10/2021 09:06 pm

Cinque Terre

48.45 K

Cinque Terre

5

ಸಂಬಂಧಿತ ಸುದ್ದಿ