ಉದ್ಯಾವರ: ಆಯುರ್ವೇದ ಎರಡನೇ ದರ್ಜೆಯ ಚಿಕಿತ್ಸಾ ಪದ್ಧತಿಯಲ್ಲ,ಆಯುರ್ವೇದಕ್ಕೆ ಅಂತಾರಾಷ್ಟ್ರೀಯ ಮಾನ್ಯತೆ ಸಿಗಬೇಕು.
ಇಎಸ್ಐ ವ್ಯಾಪ್ತಿಗೆ ಆಯುರ್ವೇದವನ್ನು ತರಬೇಕು ಎಂದು ಕೇಂದ್ರ, ರಾಜ್ಯ ಸರ್ಕಾರಗಳಿಗೆ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಒತ್ತಾಯ ಮಾಡಿದ್ದಾರೆ.
ಉದ್ಯಾವರದಲ್ಲಿ ಸಂಸ್ಥೆಯ ನೂತನ ಆಯುರ್ವೇದಿಕ್ ಆಸ್ಪತ್ರೆ ಕಟ್ಟಡ ಉದ್ಘಾಟನೆ ಬಳಿಕ ವೀರೇಂದ್ರ ಹೆಗ್ಗಡೆ ಸುದ್ದಿಗಾರರ ಜೊತೆ ಮಾತನಾಡಿದರು.ಆಯುರ್ವೇದಿಕ್ ಅಂತಾರಾಷ್ಟ್ರೀಯ ಮಾನ್ಯತೆಗಾಗಿ ಸಂಶೋಧನೆಗಳು ನಡೆಯುತ್ತಿವೆ.ಆಯುರ್ವೇದ ಬಗೆಗೆ ನಕಾರಾತ್ಮಕ ಅಭಿಪ್ರಾಯ ಬೇಡ.ಆಯುರ್ವೇದ ಪದ್ಧತಿಯ ಬಗ್ಗೆ ಜನಕ್ಕೆ ಹಿಂಜರಿಕೆ ಇರಬಾರದು ಎಂದು ಡಾ.ವೀರೇಂದ್ರ ಹೆಗ್ಗಡೆ ಹೇಳಿದ್ದಾರೆ.
PublicNext
25/09/2021 04:55 pm