ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಇದಪ್ಪಾ ದೋಸ್ತಿ ಅಂದ್ರೆ : ಗೆಳೆಯನನ್ನು ಎಳೆದು ತಂದು ವ್ಯಾಕ್ಸಿನ್ ಹಾಕಿಸಿದ ಫ್ರೆಂಡ್ ವಿಡಿಯೋ ವೈರಲ್!

ಹೆಮ್ಮಾರಿ ಸೋಂಕು ಕೊರೊನಾದಿಂದ ಬಚಾವ್ ಆಗಲು ವ್ಯಾಕ್ಸಿನ್ ಒಂದು ಅಸ್ತ್ರವಾಗಿದೆ. ಸದ್ಯ ಭಾರತದಲ್ಲಿ ಕೊರೊನಾ ವಿರುದ್ಧ ಮೆಗಾ ಲಸಿಕಾ ಅಭಿಯಾನ ನಡೆಯುತ್ತಿದೆ. ಕೋಟ್ಯಂತರ ಮಂದಿ ಈಗಾಗಲೇ 2 ಡೋಲ್ ಲಸಿಕೆ ಪಡೆದು ಸೋಂಕಿನ ವಿರುದ್ಧದ ಹೋರಾಟದಲ್ಲಿ ಕೈ ಜೋಡಿಸಿದ್ದಾರೆ.

ಇನ್ನೂ ಹಲವರು ವ್ಯಾಕ್ಸಿನ್ ಅಂದೊಡನೆ ಮಾರುದ್ದ ಓಡಿ ಹೋಗ್ತಿದ್ದಾರೆ. ಇತ್ತೀಚೆಗಷ್ಟೇ ಲಸಿಕೆ ಬೇಡ ಎಂದವರ ಹಲವು ವಿಡಿಯೋ ಗಳನ್ನು ನಾವು ನೀವೆಲ್ಲಾ ನೋಡಿದ್ದೇವೆ. ಇದರ ಬೆನ್ನಲ್ಲೇ ಮತ್ತೊಂದು ವ್ಯಾಕ್ಸಿನ್ ಪ್ರಹಸನದ ವಿಡಿಯೋ ವೈರಲ್ ಆಗಿದೆ. ಇಲ್ಲೊಬ್ಬ ಆಸಾಮಿ ಲಸಿಕೆ ಹಾಕಿಸಿಕೊಳ್ಳಲು ಹಿಂದೇಟು ಹಾಕುತ್ತಿದ್ದ ಈ ವೇಳೆ ಗೆಳೆಯನನ್ನು ಹಿಡಿದು ಎಳೆದುಕೊಂಡು ಲಸಿಕಾ ಕೇಂದ್ರಕ್ಕೆ ಕರೆ ತಂದು ಲಸಿಕೆ ಕೊಡಿಸಿದ್ದಾರೆ.

ಹೀಗೆ ಗೆಳೆಯನನ್ನು ಎಳೆದು ಕರೆ ತರುವ ವಿಡಿಯೋ ವೈರಲ್ ಆಗಿದೆ. ನೀವು ವಿಡಿಯೋ ನೋಡಿ ನಿಮ್ಮ ಫ್ರೇಂಡ್ ಗೆ ಶೇರ್ ಮಾಡಿ.

Edited By : Nirmala Aralikatti
PublicNext

PublicNext

22/09/2021 06:18 pm

Cinque Terre

61 K

Cinque Terre

1