ರಾಯಚೂರು: ಡೆಂಘೀ ಜ್ವರಕ್ಕೆ ಜಿಲ್ಲೆಯ ಸಿಂಧನೂರು ನಗರದ 6 ವರ್ಷದ ಬಾಲಕಿ ಸೋನು ಸಾವನ್ನಪ್ಪಿದ್ದಾಳೆ.
ಸೋನು ಅಂಗನವಾಡಿ ಕಾರ್ಯಕರ್ತೆ ಅನಿತಾ ಎಂಬುವವರ ಮಗಳು. ಬಾಲಕಿಯನ್ನು ಒಂದು ವಾರದಿಂದ ಸಿಂಧನೂರು ಸಾರ್ವಜನಿಕ ಆಸ್ಪತ್ರೆಯಲ್ಲಿ ದಾಖಲಿಸಿ, ಚಿಕಿತ್ಸೆ ನೀಡಲಾಗುತ್ತಿತ್ತು. ಹೆಚ್ಚಿನ ಚಿಕಿತ್ಸೆಗೆ ಬಳ್ಳಾರಿಯ ವಿಮ್ಸ್ಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಬಾಲಕಿ ಮೃತಪಟ್ಟಿದ್ದಾಳೆ.
ಕಳೆದ ವಾರವಷ್ಟೇ ಮಾನ್ವಿಯಲ್ಲಿ 5 ವರ್ಷದ ಬಾಲಕ ಡೆಂಘೀ ಗೆ ಬಲಿಯಾಗಿದ್ದ. ಜ್ವರಕ್ಕೆ ಜಿಲ್ಲೆಯಲ್ಲಿ ಈವರೆಗೆ 5 ಮಕ್ಕಳು ಸಾವನ್ನಪ್ಪಿದ್ದಾರೆ. ಇಡೀ ಜಿಲ್ಲೆಯಲ್ಲಿ ವೈರಲ್ ಫೀವರ್ ಹೆಚ್ಚಾಗಿದ್ದು, ಡೆಂಘೀ ಪ್ರಕರಣಗಳೂ ವಿಪರೀತವಾಗಿವೆ. ರಿಮ್ಸ್ ಆಸ್ಪತ್ರೆಯೊಂದರಲ್ಲೇ ಈವರೆಗೂ 30ಕ್ಕೂ ಅಧಿಕ ಮಕ್ಕಳಲ್ಲಿ ಡೆಂಘೀ ಪತ್ತೆಯಾಗಿದೆ. ಜಿಲ್ಲೆಯಾದ್ಯಂತ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ 1500ಕ್ಕೂ ಅಧಿಕ ಮಕ್ಕಳು ದಾಖಲಾಗಿದ್ದಾರೆ.
PublicNext
19/09/2021 02:38 pm