ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಒತ್ತಡ ನಿವಾರಣೆಗೆ ನೌಕಾಸನ

ಆಧುನಿಕ ಜೀವನ ಶೈಲಿಯಲ್ಲಿ ಒತ್ತಡ ಬದುಕು ಸಾಮಾನ್ಯವಾಗಿದೆ. ಈ ರೀತಿಯ ಒತ್ತಡದಿಂದ ರಕ್ತದೊತ್ತಡ, ತಲೆ ನೋವು, ನಿದ್ರಾಹೀನತೆ ಸೇರಿದಂತೆ ವಿಪರೀತ ದೈಹಿಕ, ಮಾನಸಿಕ ಒತ್ತಡವನ್ನು ಅನುಭವಿಸುತ್ತಿರುವವರು ಆಸನಗಳಲ್ಲಿ ನೌಕಾಸನ ರೂಢಿಸಿಕೊಳ್ಳುವುದು ಉತ್ತಮ.

ಇದರಿಂದ ಎಲ್ಲ ರೀತಿಯ ಒತ್ತಡಗಳಿಂದ ಮನಸ್ಸನ್ನು ಮುಕ್ತಗೊಳಿಸುತ್ತದೆ. ನೌಕಾಸನವು ಯಾವುದೇ ರೀತಿಯ ಅಡ್ಡ ಪರಿಣಾಮಗಳನ್ನು ಹೊಂದಿರುವುದಿಲ್ಲ. ಸುಲಭವಾಗಿ ಯಾರೂ ಬೇಕಾದರೂ ಇದನ್ನು ಮಾಡಬಹುದು.

ಮಾಡುವ ವಿಧಾನ

ಯೋಗ ಮ್ಯಾಟಿನ ಮೇಲೆ ಕುಳಿತು ಎರಡೂ ತೋಳುಗಳು ದೇಹದ ಎರಡೂ ಬದಿಯಲ್ಲಿರಿ ಪಾದ ಗಳನ್ನು ಒಂದಕ್ಕೊಂದು ಜೋಡಿಸಬೇಕು. ದೀರ್ಘವಾದ ಉಸಿರೆಳೆದುಕೊಂಡು ನಿಧಾನವಾಗಿ ಎದೆ ಹಾಗೂ ಪಾದವನ್ನು ನೆಲದ ಮೇಲಿಂದ ಎತ್ತಬೇಕು. ಹೀಗೆ ಮಾಡುವಾಗ ಕೈಗಳನ್ನು ಚಾಚಿರಬೇಕು. ಪರಿಣಾಮ ಹೊಟ್ಟೆಯ ಹಿಗ್ಗುವಿಕೆಯ ಅನುಭವವಾಗಬೇಕು.

ಬೆರಳುಗಳು ನೇರವಾಗಿರಲಿ. ಕಣ್ಣುಗಳ ದೃಷ್ಟಿಯೂ ನೇರವಾಗಿರಬೇಕು. ಇದೇ ಭಂಗಿಯಲ್ಲಿ ಕೆಲ ಕಾಲವಿದ್ದು ನಿಧಾನಕ್ಕೆ ಮೊದಲಿನ ಸ್ಥಿತಿಗೆ ತಲುಪ ಬೇಕು. ಈ ರೀತಿ ದಿನಕ್ಕೆ 4- 5 ಬಾರಿ ಅಭ್ಯಾಸ ಮಾಡುವುದರಿಂದ ದೇಹಾರೋಗ್ಯಕ್ಕೆ ಉತ್ತಮ ಲಾಭವಿದೆ. ನೌಕಾಸನವನ್ನು ನಿತ್ಯ ಮಾಡುವುದರಿಂದ ಕಿಬ್ಬೊಟ್ಟೆ, ತೋಳು, ಭುಜಗಳು ಶಕ್ತಿಯುತವಾಗುತ್ತದೆ. ತೊಡೆ, ಕಾಲುಗಳು, ಸ್ನಾಯುಗಳಿಗೆ ಸದೃಢತೆ ಸಿಗುವುದು. ಪಚನ ಕ್ರಿಯೆ ಉತ್ತಮಗೊಂಡು ಮಲಬದ್ಧತೆ ನಿವಾರಣೆಯಾಗುತ್ತದೆ. ಮನಸ್ಸಿಗೆ ಆರಾಮ ದೊರೆಯುತ್ತದೆ.

Edited By : Nirmala Aralikatti
PublicNext

PublicNext

03/09/2021 04:02 pm

Cinque Terre

101.48 K

Cinque Terre

1

ಸಂಬಂಧಿತ ಸುದ್ದಿ