ಬೆಂಗಳೂರು: ಹೆಮ್ಮಾರಿ ಸೋಂಕಿಗೆ ಮದ್ದಾಗಿರು ಕೋವಿಡ್ ವ್ಯಾಕ್ಸಿನ್ ಹಾಕಿಸಿಕೊಳ್ಳುವಂತೆ ಸಾರ್ವಜನಿಕರಿಗೆ ಯಾವುದೇ ನಿಬಂಧನೆ ಹೇರದಂತೆ ರಾಜ್ಯ ಸರ್ಕಾರ ಅಧಿಕೃತ ಸೂಚನೆ ನೀಡಿದೆ.ರಾಜ್ಯದ ಎಲ್ಲಾ ಜಿಲ್ಲೆಗಳ ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ವೈದ್ಯಾಧಿಕಾರಿಗಳಿಗೆ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ರವಿಕುಮಾರ್ ಈಕುರಿತು ಅಧಿಕೃತ ಸೂಚನೆ ನೀಡಿದ್ದಾರೆ.
ಲಸಿಕೆಯನ್ನು ಎಲ್ಲರಿಗೂ ವಿತರಿಸಬೇಕೆಂಬ ಉದ್ದೇಶದಿಂದ ಯಾವುದೇ ಯೋಜನೆಗೆ ಲಸಿಕಾ ಕಾರ್ಯಕ್ರಮ ಜೋಡಿಸಿದ್ದರೆ ಕೈಬಿಡಿ ಎಂದು ಅವರು ಸೂಚನೆಯಲ್ಲಿ ತಿಳಿಸಿದ್ದಾರೆ. ನೋ ವ್ಯಾಕ್ಸಿನ್, ನೋ ರೇಷನ್ ಎಂದು ಚಾಮರಾಜನಗರ ಜಿಲ್ಲಾಧಿಕಾರಿ ಆದೇಶಿಸಿ ನಂತರ ಆದೇಶ ಹಿಂತೆಗೆದುಕೊಂಡ ಹಿನ್ನೆಲೆಯಲ್ಲಿ ಸಿಎಸ್ ರವಿಕುಮಾರ್ ಈ ಸೂಚನೆ ನೀಡಿದ್ದಾರೆ.
PublicNext
02/09/2021 06:46 pm