ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಲಸಿಕೆ ಪಡೆದ ಮೇಲೆ ನಿಯಮ ಉಲ್ಲಂಘಿಸದಿರಿ: ಪ್ರಧಾನಿ ಸಲಹೆ

ನವದೆಹಲಿ: ಕೊರೊನಾ ಲಸಿಕೆ ಸಂಶೋಧಿಸಲು ತಜ್ಞರು ಸಾಕಷ್ಟು ಪರಿಶ್ರಮ ಹಾಕಿದ್ದಾರೆ. ತಮ್ಮ ಎಲ್ಲ ಹಬ್ಬ, ಸಂತೋಷಕೂಟಗಳನ್ನು ತ್ಯಜಿಸಿ ಸಂಶೋಧನೆ ಕೈಗೊಂಡು ಲಸಿಕೆ ತಯಾರಿಸಿದ್ದಾರೆ. ಅದರ ಸದುಪಯೋಗ ಪಡೆದುಕೊಳ್ಳಿ ಎಂದು ಪ್ರಧಾನಿ ಮೋದಿ ದೇಶದ ಜನತೆಗೆ ಮನವಿ ಮಾಡಿದ್ದಾರೆ.

ಮೊದಲ ಡೋಸ್ ಪಡೆದವರು ನಂತರ ಎರಡನೇ ಡೋಸ್ ಪಡೆಯುವುದನ್ನು ಮರೆಯಬೇಡಿ. ಎರಡನೇ ಡೋಸ್ ಪಡೆದ ನಂತರವಷ್ಟೇ ದೇಹದಲ್ಲಿ ಕೊರೊನಾ ನಿರೋಧಕ ಶಕ್ತಿ ಹೆಚ್ಚಾಗುತ್ತದೆ. ಲಸಿಕೆ ಪಡೆದ ನಂತರ ಸಾಮಾಜಿಕ ಅಂತರ ಪಾಲಿಸಿ, ಕಡ್ಡಾಯವಾಗಿ ಮಾಸ್ಕ್ ಧರಿಸಿ. ಜೊತೆಗೆ ಇನ್ನಿತರ ಕೊರೊನಾ ಮಾರ್ಗಸೂಚಿ ನಿಯಮಗಳನ್ನು ಪಾಲಿಸಲು ಮರೆಯದಿರಿ ಎಂದು ಪ್ರಧಾನಿ ನರೇಂದ್ರ ಮೋದಿ ಸಲಹೆ ನೀಡಿದ್ದಾರೆ.

ಎರಡನೇ ಹಂತದಲ್ಲಿ ವೃದ್ಧರು, ರೋಗಿಗಳಿಗೆ ಡೋಸ್ ನೀಡಲು ಆದ್ಯತೆ ನೀಡಲಾಗುತ್ತದೆ ಎಂದು ಮೋದಿ ತಿಳಿಸಿದ್ದಾರೆ.

Edited By : Nagaraj Tulugeri
PublicNext

PublicNext

16/01/2021 12:17 pm

Cinque Terre

90.27 K

Cinque Terre

10