ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧ್ಯಾನಕ್ಕಾಗಿ ಉದ್ಯೋಗಿಗಳಿಗೆ ಹೆಚ್ಚುವರಿ ರಜೆ

ಸಿಂಗಾಪುರ : ಒತ್ತಡದ ಬದುಕಿನಲ್ಲಿ ಉದ್ಯೋಗಿಗಳು ಮಾನಸಿಕ ಮತ್ತು ದೈಹಿಕವಾಗಿ ತೀರಾ ಕುಗ್ಗುತ್ತಿದ್ದಾರೆ.

ಹಾಗಾಗಿ ಉದ್ಯೋಗಿಗಳ ಒಳತಿಗಾಗಿ ವಿಪಾಸನಾ ಧ್ಯಾನದ ಪ್ರಯೋಜನವನ್ನು ಅರಿತ ಭಾರತೀಯ ಮೂಲದ ಉದ್ಯಮಿಯೊಬ್ಬರು ತಮ್ಮ ಕಂಪನಿಯ ಸಿಬಂದಿಯ ಮಾನಸಿಕ ಸ್ವಾಸ್ಥ್ಯವನ್ನು ಹೆಚ್ಚಿಸುವುದಕ್ಕಾಗಿ ವರ್ಷದಲ್ಲಿ 11 ದಿನಗಳ ಹೆಚ್ಚುವರಿ ರಜೆಯನ್ನು ಘೋಷಿಸಿದ್ದಾರೆ.

“ಹೊಸ ವರ್ಷದ ಸಮಯದಲ್ಲಿ ನಾನು ಪುದುಚೇರಿಯ ಆರೊವಿಲ್ಲೆಯಲ್ಲಿ ವಿಪಾಸನಾ ಧ್ಯಾನ ಕೋರ್ಸ್ ಮುಗಿಸಿದ ಅನಂತರದಿಂದ ನನ್ನ ಮಾನಸಿಕ ಸ್ವಾಸ್ಥ್ಯ ಬಹಳ ಸುಧಾರಿಸಿದೆ.

ಸಾಮಾನ್ಯವಾಗಿ ಉದ್ಯೋಗಿಗಳು ವರ್ಷಾರಂಭದಲ್ಲಿ ತಮ್ಮ ಬಹುಪಾಲು ರಜೆಯನ್ನು ಕಳೆದುಬಿಡುತ್ತಾರೆ. ಅನಂತರ ಕೆಲಸದ ಒತ್ತಡ ಅವರನ್ನು ಭಾದಿಸಲಾರಂಭಿಸುತ್ತದೆ. ಆಗ ರೆಸ್ಟ್ ಮಾಡಲು ರಜೆಯೂ ಇರುವುದಿಲ್ಲ. ಈ ಕಾರಣಕ್ಕಾಗಿಯೇ ವಿಪಾಸನ ಧ್ಯಾನದ ಪ್ರಯೋಜನ ನಮ್ಮ ಕಂಪೆನಿಯ ಸಿಬಂದಿಗೂ ಸಿಗಬೇಕೆಂದು ನಿರ್ಧರಿಸಿ ಅವರಿಗೆಲ್ಲ ವಾರ್ಷಿಕ 11 ಹೆಚ್ಚುವರಿ ರಜೆ ನೀಡಿದ್ದೇವೆ. ಆದರೆ ಅವರು ಈ 11 ದಿನಗಳನ್ನು ವಿಪಾಸನ ಧ್ಯಾನಕ್ಕಾಗಿಯೇ ಮೀಸಲಿಡಬೇಕು. ಈಗಾಗಲೇ ನಾಲ್ಕೈದು ಜನ ರಜೆಯನ್ನೂ ತೆಗೆದುಕೊಂಡಿದ್ದಾರೆ” ಎನ್ನುತ್ತಾರೆ ಕ್ಯಾಪಿಲರಿ ಟೆಕ್ನಾಲಜೀಸ್ ನ ಸಿಇಒ ಅನೀಶ್ ರೆಡ್ಡಿ.

Edited By : Nirmala Aralikatti
PublicNext

PublicNext

13/01/2021 07:19 am

Cinque Terre

46.98 K

Cinque Terre

1