ನವದೆಹಲಿ : ಕೊರೊನಾ ಲಸಿಕೆ ವಿತರಣೆಗೆ ಸಂಬಂಧಿಸಿದಂತೆ ಇಂದು ಸಂಜೆ 4 ಗಂಟೆಗೆ ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ಪ್ರಧಾನಿ ಮೋದಿ ಸಭೆ ನಡೆಸಲಿದ್ದಾರೆ.
ಕೊರೊನಾ ಲಸಿಕೆ ಬಿಡುಗಡೆ ಬಗ್ಗೆ ವರ್ಚ್ಯುಯಲ್ ಸಭೆ ನಡೆಯಲಿದ್ದು ಚರ್ಚಿಸಲಿದ್ದಾರೆ.
ಡಿಸಿಜಿಐ ಈಗಾಗಲೇ ಕೋವ್ಯಾಕ್ಸಿನ್ ಹಾಗೂ ಕೊವಿಶೀಲ್ಡ್ ಕೊರೊನಾ ಲಸಿಕೆಗಳ ತುರ್ತು ಬಳಕೆಗೆ ಅನುಮೋದನೆ ನೀಡಿದ ಬಳಿಕ ಪ್ರಧಾನಿ ಮೋದಿ ಸಿಎಂ ಗಳ ಜೊತೆ ನಡೆಸುತ್ತಿರುವ ಮೊದಲನೇ ಸಭೆ ಇದಾಗಿದೆ.
ಭಾರತ ಅತಿ ದೊಡ್ಡ ಲಸಿಕೆ ವಿತರಣೆ ಅಭಿಯಾನಕ್ಕೆ ಸಜ್ಜುಗೊಂಡಿದ್ದು, ಪ್ರಧಾನಿ ನರೇಂದ್ರ ಮೋದಿ ಲಸಿಕೆ ವಿತರಣೆ ಹಾಗೂ ಕೋವಿಡ್-19 ಪರಿಸ್ಥಿತಿಯ ಬಗ್ಗೆ ಸಿಎಂಗಳ ಜೊತೆ ವರ್ಚ್ಯುಯಲ್ ಸಭೆ ನಡೆಸಲಿದ್ದಾರೆ.
ಜ.16 ರಿಂದ ಕೊರೊನಾ ವಿರುದ್ಧದ ಎರಡು ಲಸಿಕೆಗಳನ್ನು ಭಾರತ ತನ್ನ ಆದ್ಯತೆಯ, ಮುಂಚೂಣಿಯಲ್ಲಿರುವ ಕೊರೊನಾ ವಾರಿಯರ್ಸ್ ಗೆ ನೀಡುವ ಅಭಿಯಾನಕ್ಕೆ ಚಾಲನೆ ನೀಡಲಿದೆ ಈ ಹಿನ್ನೆಲೆಯಲ್ಲಿ ಸಭೆ ಮಹತ್ವ ಪಡೆದುಕೊಂಡಿದೆ.
PublicNext
11/01/2021 07:57 am