ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಂಟ್ರೋಲ್ ಕಳೆದುಕೊಳ್ಳುತ್ತಿರುವ ಕೊರೊನಾ : ಚೇತರಿಕೆ ಪ್ರಮಾಣದಲ್ಲಿ ಗಣನೀಯ ಏರಿಕೆ

ನವದೆಹಲಿ: 2020ರ ಆರಂಭದಲ್ಲಿ ಮನುಕುಲದ ವಿನಾಶಕ್ಕೆ ಮುಂದಾದ ಡೆಡ್ಲಿ ಸೋಂಕು ಕೊರೊನಾ ತನ್ನ ಕಂಟ್ರೋಲ್ ಕಳೆದುಕೊಳ್ಳುತ್ತಿದೆ.

ಸದ್ಯ ದೇಶಾದ್ಯಂತ ಕೋವಿಡ್-19 ಸೋಂಕಿನ ಚೇತರಿಕೆ ಪ್ರಮಾಣ ಶೇಕಡ 98.83ಕ್ಕೆ ಏರಿದೆ.

ಕಳೆದ 24 ಗಂಟೆಗಳಲ್ಲಿ 23 ಸಾವಿರಕ್ಕಿಂತ ಅಧಿಕ ಸೋಂಕಿತರು ಗುಣಮುಖರಾಗಿ, ವಿವಿಧ ಆಸ್ಪತ್ರೆಗಳಿಂದ ಡಿಸ್ಜಾರ್ಜ್ ಆಗಿದ್ದಾರೆ.

ಇದರೊಂದಿಗೆ ದೇಶದಲ್ಲಿ ಈವರೆಗೆ ಗುಣಮುಖರಾದವರ ಸಂಖ್ಯೆ 98 ಲಕ್ಷದ 83 ಸಾವಿರಕ್ಕೆ ಏರಿದೆ.

ದೇಶಾದ್ಯಂತ ಕೊರೊನಾ ಸಕ್ರಿಯ ಪ್ರಕರಣಗಳ ಸಂಖ್ಯೆ 2 ಲಕ್ಷದ 54 ಸಾವಿರಕ್ಕೆ ಇಳಿಕೆ ಕಂಡಿದೆ.

ಕಳೆದ 179 ದಿನಗಳಿಂದಲೂ ದೇಶದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ ಇಳಿಕೆ ಕಾಣುತ್ತಿರುವುದು ಮಹತ್ವದ ಬೆಳವಣಿಗೆಯಾಗಿದೆ.

ಪ್ರಸ್ತುತ ದೇಶದಲ್ಲಿ ಸಕ್ರಿಯ ಪ್ರಕರಣಗಳ ಶೇಕಡಾವಾರು 2.47ರಷ್ಟಿದ್ದು, ಕಳೆದ 7 ದಿನಗಳಿಂದ ದೇಶದಲ್ಲಿ 300ಕ್ಕಿಂತಲೂ ಕಡಿಮೆ ಸಾವು ವರದಿಯಾಗುತ್ತಿವೆ ಎಂದು ಕೇಂದ್ರ ಸರ್ಕಾರ ಮಾಹಿತಿ ನೀಡಿದೆ.

Edited By : Nirmala Aralikatti
PublicNext

PublicNext

01/01/2021 12:17 pm

Cinque Terre

77.36 K

Cinque Terre

4