ಗದಗ: ಮಹಾಮಾರಿ ಕೊರೊನಾದಿಂದ ಕಂಗೆಟ್ಟಿದ್ದ ಮನುಕುಲಕ್ಕೆ ಈಗಾ ಮತ್ತೊಂದು ಆತಂಕ ಶುರುವಾಗಿದೆ.
ರೂಪಾಂತರಿ ಕೊರೊನಾ ಮಕ್ಕಳಿಗೆ ಹೆಚ್ಚಾಗಿ ವಕ್ಕರಿಸುತ್ತಿರುವುದರಿಂದ ಜನರ ನೆಮ್ಮದಿ ಮಾಯವಾಗುತ್ತಿದೆ.
ಹೊಸ ಕೋವಿಡ್ ಪ್ರಭೇದದ ನಡುವೆಯೂ ಪೋಸ್ಟ್ ಕೋವಿಡ್ ಲಕ್ಷಣಗಳು ಮಕ್ಕಳಲ್ಲಿ ಕಂಡುಬರುತ್ತಿರುವುದು ಜಿಲ್ಲೆಯ ಮಕ್ಕಳ ತಜ್ಞರನ್ನೂ ಆತಂಕಗೊಳಿಸಿದೆ.
15 ಮಕ್ಕಳಲ್ಲಿ ಪೋಸ್ಟ್ ಕೋವಿಡ್ ಲಕ್ಷಣ ಕಂಡುಬಂದಿದ್ದು ಕೆಲವು ಮಕ್ಕಳ ಪರಿಸ್ಥಿತಿ ಗಂಭೀರವಾಗಿದೆ ಎಂದು ಮಕ್ಕಳ ತಜ್ಞ ಡಾ ಜಯರಾಜ್ ಪಾಟೀಲ್ ಮಾಹಿತಿ ನೀಡಿದ್ದಾರೆ.
ಮಕ್ಕಳಿಗೆ ಗೊತ್ತಾಗದ ರೀತಿಯಲ್ಲಿ ಪೋಸ್ಟ್ ಕೋವಿಡ್ ಬಂದು ಹೋಗಿದ್ದು, ಈಗ ವ್ಯತಿರಿಕ್ತ ಪರಿಣಾಮ ಬೀರುತ್ತಿರುವುದು ಎಲ್ಲರನ್ನು ಬೆಚ್ಚಿ ಬೀಳಿಸುವಂತಿದೆ ಎಂದು ಹೇಳಿದ್ದಾರೆ.
15ಕ್ಕೂ ಹೆಚ್ಚು ಮಕ್ಕಳಿಗೆ ಪೋಸ್ಟ್ ಕೋವಿಡ್ ಪತ್ತೆಯಾಗಿದೆ. ವಿಪರೀತ ಜ್ವರ, ಮೈ ಎಲ್ಲ ಕೆಂಪಗಾಗೋದು, ಅತಿಯಾದ ಹೊಟ್ಟೆ ನೋವಿನಂತಹ ಲಕ್ಷಣಗಳು ಕಂಡು ಬರುತ್ತಿವೆ.
ಮಕ್ಕಳ IGG ಟೆಸ್ಟ್ ರಿಪೋರ್ಟ್ ನಲ್ಲಿ ಪಾಸಿಟಿವ್ ವರದಿ ಬಂದಿದೆ. ಇದರಲ್ಲಿ, ಕೆಲ ಮಕ್ಕಳ ಪರಿಸ್ಥಿತಿ ಗಂಭೀರವಾಗಿದೆ. ಇದು ತಜ್ಞರನ್ನೇ ಬಿಚ್ಚಿ ಬೀಳಿಸುವಂತಿದೆ ಎಂದು ಚಿಕ್ಕ ಮಕ್ಕಳ ತಜ್ಞ ಡಾ. ಜಯರಾಜ್ ಹೇಳಿದ್ದಾರೆ.
PublicNext
30/12/2020 10:51 am