ನವದೆಹಲಿ: ನ್ಯುಮೋನಿಯಾ ರೋಗಕ್ಕೆ ವ್ಯಾಕ್ಸಿನ್ ಕಂಡುಹಿಡಿಯುವ ದಿಕ್ಕಿನಲ್ಲಿ ಭಾರತ ಬಹುದೊಡ್ಡ ಯಶಸ್ಸನ್ನು ಸಾಧಿಸಿದೆ.
ಹೌದು. ಪುಣೆ ಮೂಲದ ಸಿರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ ಭಾರತದ ಮೊಟ್ಟಮೊದಲ ಸ್ವದೇಶಿ ನಿರ್ಮಿತ ನ್ಯುಮೋಕೊಕಲ್ ವ್ಯಾಕ್ಸಿನ್ ನ್ಯೂಮೊಸಿಲ್ (Pneumosil vaccine) ವ್ಯಾಕ್ಸಿನ್ ಅನ್ನು ಇಂದು ಬಿಡುಗಡೆ ಮಾಡಿದೆ. ಈ ಸಂದರ್ಭದಲ್ಲಿ ಕೇಂದ್ರ ಅರೋಗ್ಯ ಸಚಿವ ಡಾ. ಹರ್ಷವರ್ಧನ್ ಉಪಸ್ಥಿತರಿದ್ದರು.
ಹರ್ಷವರ್ಧನ್ ಅವರ ಉಪಸ್ಥಿತಿಯಲ್ಲಿಯೇ ಕಂಪನಿ ಈ ವ್ಯಾಕ್ಸಿನ್ ಬಿಡುಗಡೆ ಮಾಡಿದೆ. ಈ ಕುರಿತು ಅಧಿಕೃತ ಮಾಹಿತಿ ನೀಡಿರುವ ಎಸ್‌ಐಐ ಸಂಪೂರ್ಣ ಸ್ವದೇಶಿ ನಿರ್ಮಿತ ನ್ಯುಮೋಸಿಲ್ ಅನ್ನು ಇಂದು ಬಿಡುಗಡೆ ಮಾಡಲಾಗಿದೆ.
ಈ ಕುರಿತು ಮಾತನಾಡಿದ ಕೇಂದ್ರ ಆರೋಗ್ಯ ಸಚಿವ ಡಾ. ಹರ್ಷವರ್ಧನ್ ಅವರು, ''ದೇಶದ ಸಾರ್ವಜನಿಕ ಆರೋಗ್ಯ ರಕ್ಷಣೆಯಲ್ಲಿ ಇದೊಂದು ಪ್ರಮುಖ ಮೈಲಿಗಲ್ಲು. ಕೈಗೆಟುಕುವ ದರದಲ್ಲಿ ಉತ್ತಮ ಗುಣಮಟ್ಟದ ಲಸಿಕೆಯಾಗಿರುವ ಇದು ಮಕ್ಕಳನ್ನು ನ್ಯೂಮೊಕಾಕಲ್ ಕಾಯಿಲೆಗಳಿಂದ ರಕ್ಷಣೆ ಒದಗಿಸಲಿದೆ'' ಎಂದು ಹೇಳಿದ್ದಾರೆ.
PublicNext
29/12/2020 10:04 pm