ಬೆಂಗಳೂರು : ನಿಲ್ಲದ ಕೊರೊನಾ ಸೋಂಕು ಹರಡುವಿಕೆಯಿಂದಾಗಿ ಕಂಗೆಟ್ಟ ಸೋಂಕು ಹತೋಟಿಗಾಗಿ ಸರ್ಕಾರ ಮತ್ತಷ್ಟು ಕಠಿಣ ಕ್ರಮ ಕೈಗೊಳ್ಳಲು ಮುಂದಾಗಿದೆ.
ಹಳೇ ನಿಯಮಗಳನ್ನು ಮರು ಜಾರಿ ಮಾಡುತ್ತಿದೆ. ಅಲ್ಲದೇ ಕರ್ನಾಟಕಕ್ಕೆ ಮೂರು ತಿಂಗಳು ಕೊರೊನಾ ಮಹಾ ಗಂಡಾಂತರ ಎದುರಾಗಲಿದೆ.
ಮುಂದಿನ ಮೂರು ತಿಂಗಳಲ್ಲಿ ಹಬ್ಬ, ಮದುವೆ, ಕಾರ್ಯಕ್ರಮ, ಸಾಂಸ್ಕೃತಿಕ ಕಾರ್ಯಕ್ರಮ, ನವರಾತ್ರಿ ಪೂಜಾ ಕಾರ್ಯಕ್ರಮ ಜಾಸ್ತಿ ನಡೆಯಲಿದೆ.
ಹೀಗಾಗಿ ಈ 3 ತಿಂಗಳಲ್ಲಿ ಕಾರ್ಯಕ್ರಮ ಮಾಡಿದರೆ ಟಫ್ ರೂಲ್ಸ್ ಪಾಲನೆ ಕಡ್ಡಾಯವಾಗಿದೆ.
ಇದರಿಂದ ಕರ್ನಾಟಕ ಅಕ್ಟೋಬರ್ ನಿಂದ ಡಿಸೆಂಬರ್ ವರೆಗೆ ಕೊರೊನಾ ಮಹಾ ಅಗ್ನಿಪರೀಕ್ಷೆಯನ್ನ ಎದುರಿಸಬೇಕಾಗುತ್ತದೆ.
3 ತಿಂಗಳಿಗೆ ಹೊಸ ರೂಲ್ಸ್
* ಕಂಟೈನ್ ಮೆಂಟ್ ವಲಯದಲ್ಲಿ ಯಾವುದೇ ಕಾರ್ಯಕ್ರಮ ನಡೆಸುವಂತಿಲ್ಲ.
* ಮದುವೆ, ಸಮಾರಂಭ, ಪೂಜೆ, ಸಾಂಸ್ಕೃತಿಕ ಕಾರ್ಯಕ್ರಮ, ಸಾರ್ವಜನಿಕ ಸಮಾರಂಭ ಯಾವುದೇ ಕಾರ್ಯಕ್ರಮ ನಡೆಸಿದರೆ 65 ವರ್ಷ ಮೇಲ್ಪಟ್ಟವರನ್ನು, ಗರ್ಭಿಣಿಯರನ್ನು ಹಾಗೂ ಇತರೆ ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಿರುವವರನ್ನು ಕಾರ್ಯಕ್ರಮದಲ್ಲಿ ಭಾಗಿಯಾಗದಂತೆ ಎಚ್ಚರಿಕೆ ವಹಿಸಬೇಕು.
* ಮದುವೆ, ಪೂಜಾ ಕಾರ್ಯಗಳಿಗೆ ಕಡಿಮೆ ಜನ ಸೇರುವಂತೆ ನೋಡಿಕೊಳ್ಳಬೇಕು. ಥರ್ಮಲ್ ಸ್ಕ್ಯಾನಿಂಗ್ ಕಡ್ಡಾಯ
* ಪ್ರತಿ ಸಮಾರಂಭಕ್ಕೂ ಪ್ರತ್ಯೇಕ ಎಂಟ್ರಿ ಎಕ್ಸಿಟ್ ಇರಬೇಕು.
* ಸಾಮಾಜಿಕ ಅಂತರ,ಮಾಸ್ಕ್ ಧರಿಸಿದ್ದಾರೆಯೇ ಎನ್ನುವುದನ್ನು ಗುರುತಿಸಲು ಕ್ಯಾಮೆರಾ ಕಣ್ಗಾವಲು.
PublicNext
07/10/2020 07:55 am