ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ರಾಜ್ಯಾದ್ಯಂತ ಆಸ್ಪತ್ರೆಗಳಲ್ಲಿ 'ಕೃತಕ ಆಮ್ಲಜನಕ'ದ ತೀವ್ರ ಕೊರತೆ- ಪ್ರಾಣ ಬಿಡುತ್ತಿದ್ದಾರೆ ಕೋವಿಡ್ ಸೋಂಕಿತರು

ಬೆಂಗಳೂರು: ರಾಜ್ಯಾದ್ಯಂತ ಆಸ್ಪತ್ರೆಗಳಲ್ಲಿ'ಕೃತಕ ಆಮ್ಲಜನಕ'ದ ತೀವ್ರ ಕೊರತೆ ಉಂಟಾಗಿದ್ದು, ರೋಗಿಗಳು ಉಸಿರುಗಟ್ಟಿ ಪ್ರಾಣ ಬಿಡುತ್ತಿದ್ದಾರೆ.

ಕೊರೊನಾ ಸೋಂಕಿತ ರೋಗಿಗಳಿಗೆ ಕೃತಕ ಆಮ್ಲಜನಕದ ಅತ್ಯಗತ್ಯ. ಆದರೆ ವೆಂಟಿಲೇಟರ್‌ ಹಾಗೂ ಆಮ್ಲಜನಕದ ಸಿಲಿಂಡರ್‌ ಕೊರತೆಯಿಂದಾಗಿ ತಕ್ಷಣವೇ ಚಿಕಿತ್ಸೆ ಸಿಗುತ್ತಿಲ್ಲ. ಪರಿಣಾಮ ರೋಗಿಗಳು ಸಾವು-ಬದುಕಿನ ಮಧ್ಯೆ ಹೋರಾಡುತ್ತಿದ್ದಾರೆ. ಇತ್ತ ಆಕ್ಸಿಜನ್‌ಗೆ ಬೇಡಿಕೆ ಹೆಚ್ಚಾಗುತ್ತಿದ್ದಂತೆ ಇದರ ದರವೂ ಏರಿಕೆ ಕಂಡಿದೆ. ಮಾರ್ಚ್ ಗೂ ಮುನ್ನ 600 ರೂ. ಇದ್ದ ಪ್ರತಿ ಸಿಲಿಂಡರ್‌ ದರ ಈಗ 800 ರೂ.ಗೆ ಏರಿಕೆಯಾಗಿದೆ. ಈ ಹಿಂದೆ 25 ರೂ.ಗಳಷ್ಟಿದ್ದ ಒಂದು ಕ್ಯೂಬಿಕ್‌ ಮೀಟರ್‌ ಆಕ್ಸಿಜನ್‌ ಬೆಲೆ ಈಗ 50 ರೂ.ಗೆ ಜಿಗಿದಿದೆ.

ರಾಜ್ಯದಲ್ಲಿ ಕೊರೊನಾ ಸೋಂಕಿತರ ಚಿಕಿತ್ಸೆಗಾಗಿ ಒಟ್ಟು 483 ದೊಡ್ಡ, ಸಣ್ಣ ಮತ್ತು ಮಧ್ಯಮ ಪ್ರಮಾಣದ ಖಾಸಗಿ ಆಸ್ಪತ್ರೆಗಳನ್ನು ಗುರುತಿಸಲಾಗಿದೆ. ಈ ಆಸ್ಪತ್ರೆಗಳು ಕೋವಿಡ್ ಸೋಂಕಿತರ ಚಿಕಿತ್ಸೆಗೆ ಶೇ.50ರಷ್ಟು ಬೆಡ್‌ ಮೀಸಲಿಡುವುದು ಕಡ್ಡಾಯ. ಆದರೆ ಕೆಲ ಆಸ್ಪತ್ರೆಗಳಲ್ಲಿ ಸರಿಯಾದ ಪ್ರಮಾಣದಲ್ಲಿ ಆಕ್ಸಿಜನ್ ಲಭ್ಯವಾಗುತ್ತಿಲ್ಲ. ಬೆಂಗಳೂರು ನಗರ ಸೇರಿದಂತೆ ಜಿಲ್ಲಾಕೇಂದ್ರಗಳಲ್ಲಿರುವ ದೊಡ್ಡ ಆಸ್ಪತ್ರೆಗಳು ಆಮ್ಲಜನಕ ದಾಸ್ತಾನಿಗೆ ಪ್ರತ್ಯೇಕ ಘಟಕಗಳನ್ನು ಹೊಂದಿವೆ. ಆದರೆ ಸಿಲಿಂಡರ್‌ ಕೊರತೆಯ ಪರಿಣಾಮ ಸಿಲಿಂಡರ್ ಮೂಲಕ ಆಕ್ಸಿಜನ್‌ ಸರಬರಾಜಾಗುತ್ತಿರುವ ಮಧ್ಯಮ ಮತ್ತು ಸಣ್ಣ ಪ್ರಮಾಣದ ಆಸ್ಪತ್ರೆಗಳು ಸಂಕಷ್ಟಕ್ಕೆ ಸಿಲುಕಿವೆ.

Edited By : Vijay Kumar
PublicNext

PublicNext

20/09/2020 12:13 pm

Cinque Terre

124.63 K

Cinque Terre

10